ಉಡುಪಿ: ನಿರೀಕ್ಷೆ ಮೀರಿದ ಪಶ್ಚಿಮ ಬಂಗಾಳದ ಗೆಲುವು ದೇಶ ಗೆದ್ದ ಅನುಭವ ಕೊಟ್ಟಿದೆ. ದೀದಿ ಸರಕಾರ, ಕೇವಲ ಬಿಜೆಪಿ ಮತ್ತು ಮೋದಿ ವಿರೋಧಿಯಾಗಿರಲಿಲ್ಲ. ಬದಲಾಗಿ ರಾಷ್ಟ್ರ ವಿರೋಧಿಯಾಗಿತ್ತು. ಸ್ತ್ರೀ ವಿರೋಧಿ, ಹಿಂದೂ ವಿರೋಧಿ, ದೇಶವಿರೋಧಿ ಸರಕಾರವೊಂದರ ನಿರ್ಗಮನ ದೇಶ ಮೊದಲು ಎಂಬ ರಾಷ್ಟ್ರ ಭಕ್ತರು ನಿಟ್ಟಿಸಿರು ಬಿಡುವಂತಾಗಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಅಸ್ಸಾಂ, ಪುದುಚೇರಿಯ ಗೆಲುವು ತಮಿಳುನಾಡು, ಕೇರಳದ ಫಲಿತಾಂಶ ಏನೇ ಆದರೂ ಎನ್‌ಡಿಎ ತಮ್ಮ ಶಕ್ತಿ ವೃದ್ಧಿಸಿಕೊಂಡಿದೆ ಎಂದು ಕೋಟ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕರ್ನಾಟಕದ ಫಲಿತಾಂಶದ ಬಗ್ಗೆ ಮಾತನಾಡಿದ ಅವರು ಆಡಳಿತ ಪಕ್ಷ ಗೆದ್ದಿದೆ ಎನ್ನುವುದಕ್ಕಿಂತ ಹಣಬಲ ಗೆದ್ದಿದೆ ಎಂದು ವರದಿಗಳು ತಿಳಿಸುತ್ತಿವೆ. ಒಟ್ಟಾರೆ ಫಲಿತಾಂಶವನ್ನು ಗೌರವಿಸುತ್ತೇವೆ. ಹಾಗೂ ಇಂದಿನ ಚುನಾವಣೆ ಭಾರತೀಯ ಜನತಾ ಪಕ್ಷದ ಸಂಘಟನಾ ಶಕ್ತಿಯನ್ನು ಹೆಚ್ಚಿಸಲಿದೆ ಎಂದಿದ್ದಾರೆ.
Kshetra Samachara
05/05/2026 11:40 am
LOADING...