ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿವಮೊಗ್ಗ: ಟ್ರಾಫಿಕ್ ಪೊಲೀಸರಿಗೆ ಧಮ್ಕಿ ಹಾಕಿದ್ದ ಯುವಕರಿಬ್ಬರು ಜೈಲಿಗೆ

ಶಿವಮೊಗ್ಗ: ಹೆಲ್ಮೆಟ್ ಹಾಕದೇ ಪೊಲೀಸರಿಗೇ ಧಮ್ಕಿ ಹಾಕಿದ ಇಬ್ಬರು ಯುವಕರ ವಿರುದ್ಧ ಶಿವಮೊಗ್ಗದ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಬಂಧಿಸಲ್ಪಟ್ಟ ಇಬ್ಬರಿಗೂ ನ್ಯಾಯಾಲಯ ಜೈಲಿಗೆ ಕಳಿಸಿದೆ.

ಮೇ 4 ರ ಬೆಳಿಗ್ಗೆ ಎಎಸ್ ಐ ಮಂಜುನಾಥ್ ಮತ್ತು ಪೊಲೀಸ್ ಪೇದೆ ಸಂತೋಷ್ ಗಾಂಧಿ ಬಜಾರಿನಲ್ಲಿ ಸಂಚಾರಿ ಕರ್ತವ್ಯದಲ್ಲಿದ್ದಾಗ ದ್ವಿಚಕ್ರ ವಾಹನ ಸವಾರ ಸೈಯದ್ ಮುಜಾಮಿಲ್ ಹೆಲ್ಮೆಟ್ ಧರಿಸದೇ ಸಂಚಾರಿ ನಿಯಮ ಉಲ್ಲಂಘಿಸಿದ್ದ.

ಇದನ್ನು ಗಮನಿಸಿದ ಪೊಲೀಸರು ಆತನ ವಾಹನ ನಿಲ್ಲಿಸಲು ಸೂಚಿಸಿ, ಹೆಲ್ಮೆಟ್ ಅನಿವಾರ್ಯತೆ ಬಗ್ಗೆ ಹೇಳುತ್ತಿದ್ದಾಗಲೇ ಬೈಕ್ ನಿಲ್ಲಿಸಿ ಮುಜಾಮಿಲ್ ವಾಗ್ವಾದಕ್ಕಿಳಿದಿದ್ದ. ಅಲ್ಲಿಗೆ ಬಂದ ಜಬೀವುಲ್ಲಾ ಎಂಬಾತ, ನಾವು ಹೆಲ್ಮೆಟ್ ಹಾಕೋದಿಲ್ಲ. ಏನ್ ಮಾಡ್ಕೊತೀಯ ಎಂದು ಪೊಲೀಸರನ್ನು ತಳ್ಳಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ.

ಬೈಕ್ ಕೀ ಕಿತ್ತುಕೊಂಡ ಇಬ್ಬರೂ ನಿಮಗೆ ನೋಡಿಕೊಳ್ಳುತ್ತೇವೆಂದು ಬೆದರಿಕೆ ಹಾಕಿ ಬೈಕ್ ಒಯ್ದಿದ್ದಾರೆ. ಈ ಬಗ್ಗೆ ಪೊಲೀಸರು ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಿಸುತ್ತಿದ್ದಂತೆಯೇ ಮುಜಾಮಿಲ್ ಮತ್ತು ಜಬೀವುಲ್ಲಾ ಅವರಿಬ್ಬರನ್ನೂ ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ನ್ಯಾಯಾಲಯ ಇಬ್ಬರಿಗೂ ನ್ಯಾಯಾಂಗ ಬಂಧನಕ್ಕೊಪ್ಪಿಸಿದೆ.

Edited By : Nagaraj Tulugeri
PublicNext

PublicNext

05/05/2026 04:59 pm

Cinque Terre

4.33 K

Cinque Terre

1

ಸಂಬಂಧಿತ ಸುದ್ದಿ