ಶಿವಮೊಗ್ಗ : ಹೊಸನಗರದ ನಗರ ರಸ್ತೆಯಲ್ಲಿರುವ ಶ್ರೀ ವೀರಾಂಜನೇಯ ದೇವಸ್ಥಾನದ ಬಾಗಿಲು ಒಡೆದ ಕಳ್ಳರು ಹುಂಡಿಯಲ್ಲಿದ್ದ ನಗದು ಹಣ ಕಳ್ಳತನ ಮಾಡಿದ್ದಾರೆ. ಕಳ್ಳರು ದೇವಸ್ಥಾನದ ಬಾಗಿಲಿನ ಬೀಗ ಮುರಿದು ಒಳನುಗ್ಗಿದ್ದಾರೆ.
ರಾತ್ರಿ ಅರ್ಚಕರು ಪೂಜೆ ಮುಗಿಸಿ ಬಾಗಿಲು ಹಾಕಿಕೊಂಡು ಮನೆಗೆ ತೆರಳಿದ್ದರು. ಮರುದಿನ ಬೆಳಿಗ್ಗೆ ಅರ್ಚಕರು ದೇವಸ್ಥಾನಕ್ಕೆ ಬಂದಾಗ ಮುಂಭಾಗದ ಬಾಗಿಲಿನ ಬೀಗ ಒಡೆದಿರುವುದು ಕಂಡುಬಂದಿದೆ. ಕೂಡಲೇ ಅವರು ದೇವಸ್ಥಾನದ ಟ್ರಸ್ಟ್ ಅಧ್ಯಕ್ಷ ಮಹೇಶ.ಜಿ ಅವರಿಗೆ ಮಾಹಿತಿ ನೀಡಿದ್ದರು.
ಸ್ಥಳಕ್ಕೆ ಧಾವಿಸಿದ ದೇವಸ್ಥಾನದ ಕಮಿಟಿ ಪ್ರಮುಖರು ಪರಿಶೀಲಿಸಿದಾಗ, ಗರ್ಭಗುಡಿಯ ಮುಂಭಾಗದಲ್ಲಿದ್ದ ಒಂದು ದೊಡ್ಡ ಹಾಗೂ ಎರಡು ಚಿಕ್ಕ ಕಾಣಿಕೆ ಹುಂಡಿಗಳನ್ನು ಒಡೆಯಲಾಗಿತ್ತು. ಅವುಗಳಲ್ಲಿದ್ದ ಕಾಣಿಕೆ ಹಣವನ್ನು ಕಳ್ಳತನ ಮಾಡಲಾಗಿತ್ತು. ಹುಂಡಿಯಲ್ಲಿದ್ದ ಸುಮಾರು 25,000 ನಗದು ಹಣವನ್ನು ಕಳ್ಳರು ದೋಚಿದ್ದಾರೆ ಎಂದು ಆರೋಪಿಸಲಾಗಿದೆ.
ಶ್ರೀ ವೀರಾಂಜನೇಯಸ್ವಾಮಿ ಸೇವಾ ಟ್ರಸ್ಟ್ ಅಧ್ಯಕ್ಷ ಮಹೇಶ.ಜಿ ಅವರು ದೂರು ನೀಡಿದ್ದಾರೆ. ಹೊಸನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
06/05/2026 08:27 am
LOADING...