ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಿದ್ದರಾಮಯ್ಯಗೆ ದೇಶದ ಅತ್ಯಂತ ಹಿರಿಯ ಮುಖ್ಯಮಂತ್ರಿ ಗೌರವದ ಗರಿ

ನವದೆಹಲಿ/ಬೆಂಗಳೂರು : ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದೀಗ ದೇಶದ ಹಾಲಿ ಮುಖ್ಯಮಂತ್ರಿಗಳ ಪೈಕಿ ಅತಿ ಹಿರಿಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 77 ವರ್ಷದ ಸಿದ್ದರಾಮಯ್ಯ ಅವರು ಪ್ರಸ್ತುತ ದೇಶದ ಅತ್ಯಂತ ಹಿರಿಯ ಸಿಎಂ ಆಗಿ ಹೊರಹೊಮ್ಮಿದ್ದಾರೆ.

ಈ ಮೊದಲು 82 ವರ್ಷದ ಕೇರಳದ ಪಿಣರಾಯಿ ವಿಜಯನ್ ದೇಶದ ಅತ್ಯಂತ ಹಿರಿಯ ಮುಖ್ಯಮಂತ್ರಿಯಾಗಿದ್ದರು. ಇತ್ತೀಚೆಗೆ ನಡೆದ ಪಂಚರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕೇರಳದಲ್ಲಿ ಆಡಳಿತಾರೂಢ ಎಡಪಕ್ಷಗಳ ಮೈತ್ರಿಕೂಟ ಸೋಲನುಭವಿಸಿದ ನಂತರ ವಿಜಯನ್ ರಾಜೀನಾಮೆ ನೀಡಿದರು. ಇದರೊಂದಿಗೆ, ಈವರೆಗೆ ಎರಡನೇ ಸ್ಥಾನದಲ್ಲಿದ್ದ 77 ವರ್ಷದ ಸಿದ್ದರಾಮಯ್ಯ ಅವರು ಹಿರಿಯ ಮುಖ್ಯಮಂತ್ರಿಗಳ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ.

ಇತ್ತೀಚೆಗಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು `ಕರ್ನಾಟಕದಲ್ಲಿ ಸುದೀರ್ಘಾವಧಿ ಮುಖ್ಯಮಂತ್ರಿ’ ಎಂಬ ಮತ್ತೊಂದು ಮಹತ್ವದ ಪಟ್ಟವನ್ನು ಪಡೆದಿದ್ದರು. 2ನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗಿರುವ ಇವರು, 2,792 ದಿನಗಳ ಕಾಲ ಸಿಎಂ ಆಗಿದ್ದ ದೇವರಾಜ ಅರಸ್ ಅವರ ದಾಖಲೆಯನ್ನು ಮೀರಿ, ರಾಜ್ಯದಲ್ಲಿ ಅತಿ ಹೆಚ್ಚು ಕಾಲ ಆಡಳಿತ ನಡೆಸಿದವರು ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ.

ಹಾಲಿ ದೇಶದ ಇತರ ಹಿರಿಯ ಮುಖ್ಯಮಂತ್ರಿಗಳ ಪಟ್ಟಿಯಲ್ಲಿ ಸಿದ್ದರಾಮಯ್ಯ ನಂತರದ ಸ್ಥಾನಗಳಲ್ಲಿ ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು (75), ಮಿಜೋರಂನ ಲಾಲ್ ದುಹೋಮಾ (74), ನಾಗಾಲ್ಯಾಂಡ್‌ನ ನೆಪ್ಪು ರಿಯೋ (74) ಮತ್ತು ಪುದುಚೇರಿಯ ರಂಗಸ್ವಾಮಿ (74) ಇದ್ದಾರೆ.

ಅರುಣಾಚಲ ಪ್ರದೇಶದ ಪೇಮಾ ಖಂಡು (46) ಅವರು ದೇಶದ ಹಾಲಿ ಅತಿ ಕಿರಿಯ ಮುಖ್ಯಮಂತ್ರಿಯಾಗಿದ್ದಾರೆ. ರಾಜ್ಯವನ್ನು ಆಳಿದ ಅತಿ ಹಿರಿಯ ನಾಯಕ ಎಂಬ ಐತಿಹಾಸಿಕ ಖ್ಯಾತಿ ತಮಿಳುನಾಡು ಮಾಜಿ ಸಿಎಂ ದಿ.ಕರುಣಾನಿಧಿ (92) ಅವರಿಗಿದೆ.

Edited By : Nirmala Aralikatti
PublicNext

PublicNext

06/05/2026 05:06 pm

Cinque Terre

4.27 K

Cinque Terre

0

ಸಂಬಂಧಿತ ಸುದ್ದಿ