ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭಟ್ಕಳ: ಅರಣ್ಯ ಇಲಾಖೆ ಜೀಪ್ ಕಂಡು ಕಾರು ಬಿಟ್ಟು ಪರಾರಿ - ಅಕ್ರಮ ಜಾನುವಾರು ಸಾಗಾಟ ಪತ್ತೆ

ಭಟ್ಕಳ: ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಆರೋಪಿತರು ಅರಣ್ಯ ಇಲಾಖೆ ಜೀಪ್ ಕಂಡ ತಕ್ಷಣ ಕಾರು ಬಿಟ್ಟು ಪರಾರಿಯಾದ ಘಟನೆ ತಾಲೂಕಿನ ಹಾಡುವಳ್ಳಿ ಗ್ರಾಮದ ಹಲ್ಯಾಣಿ ಬಳಿ ನಡೆದಿದೆ.

ವಧೆ ಮಾಡಿ ಮಾಂಸ ಮಾರಾಟ ಮಾಡುವ ಉದ್ದೇಶದಿಂದ ಆರೋಪಿತರು ಮಾರುತಿ ಸುಜುಕಿ ಬಲೆನೋ ಕಾರಿನಲ್ಲಿ ಸುಮಾರು ₹1.03 ಲಕ್ಷ ಮೌಲ್ಯದ ಜಾನುವಾರುಗಳನ್ನು ತುಂಬಿಕೊಂಡು ಸಾಗಿಸುತ್ತಿದ್ದರು ಎನ್ನಲಾಗಿದೆ. ಜಾನುವಾರುಗಳನ್ನು ಹಿಂಸಾತ್ಮಕವಾಗಿ ಕಟ್ಟಿ, ನೀರು ಹಾಗೂ ಹುಲ್ಲು ನೀಡದೆ ಸಾಗಿಸಲಾಗುತ್ತಿತ್ತು ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಬೆಳಗಿನ ಜಾವ ಹಲ್ಯಾಣಿ ಪ್ರದೇಶದಲ್ಲಿ ಪೆಟ್ರೋಲಿಂಗ್ ನಡೆಸುತ್ತಿದ್ದ ಅರಣ್ಯ ಇಲಾಖೆ ವಾಹನವನ್ನು ಕಂಡ ಆರೋಪಿತರು ಕಾರನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ.

ಬಳಿಕ ಅಧಿಕಾರಿಗಳು ವಾಹನವನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದಾರೆ.

ಈ ಸಂಬಂಧ ಆರೋಪಿತರ ವಿರುದ್ಧ ಗ್ರಾಮೀಣ ಠಾಣೆ ಪಿಎಸೈ ಮಲ್ಲಿಕಾರ್ಜುನಯ್ಯ ಕೊರಾಣಿ

ಪ್ರಕರಣ ದಾಖಲಿಸಿ ಕೊಂಡು

ತನಿಖೆ ಕೈಗೊಂಡಿದ್ದಾರೆ.

Edited By : PublicNext Desk
Kshetra Samachara

Kshetra Samachara

17/05/2026 10:06 pm

Cinque Terre

10 K

Cinque Terre

0

ಸಂಬಂಧಿತ ಸುದ್ದಿ