ಹೌರಾ;(ಪಶ್ಚಿಮ ಬಂಗಾಳ): ತನ್ನನ್ನು ತಾನು ಹೌರಾದ ಡಾನ್ ಎಂದು ಕರೆದುಕೊಳ್ಳುತ್ತಿದ್ದ ಕುಖ್ಯಾತ ರೌಡಿಶೀಟರ್ ಆಕಾಶ್ ಸಿಂಗ್‌ಗೆ ಪೊಲೀಸರು ಸಾರ್ವಜನಿಕವಾಗಿ ತಕ್ಕ ಶಾಸ್ತಿ ಮಾಡಿದ್ದಾರೆ. ಸಾರ್ವಜನಿಕರಲ್ಲಿ ರೌಡಿಗಳ ಮೇಲಿರುವ ಭಯವನ್ನು ಹೋಗಲಾಡಿಸಲು ಮತ್ತು ಇತರೆ ಅಪರಾಧಿಗಳಿಗೆ ಕಠಿಣ ಸಂದೇಶ ರವಾನಿಸಲು ಪೊಲೀಸರು ಆತನನ್ನು ಕೇವಲ ಒಳ ಉಡುಪಿನಲ್ಲಿಯೇ ಹೌರಾದ ಬೀದಿಗಳಲ್ಲಿ ಮೆರವಣಿಗೆ ಮಾಡಿದ್ದಾರೆ.
ಹಿನ್ನೆಲೆ ಏನು?:
ಆರೋಪಿ ಆಕಾಶ್ ಸಿಂಗ್ ವಿರುದ್ಧ ಹಲವು ಗಂಭೀರ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. 2021ರಲ್ಲಿ ಪೊಲೀಸರ ಮೇಲೆಯೇ ಗುಂಡಿನ ದಾಳಿ ನಡೆಸಿದ ಆರೋಪ ಈತನ ಮೇಲಿದೆ.
ಬಾಂಬ್ ದಾಳಿ: ವಿವಿಧೆಡೆ 20 ಕ್ಕೂ ಹೆಚ್ಚು ಬಾಂಬ್‌ಗಳನ್ನು ಎಸೆದು ಸಾರ್ವಜನಿಕರಲ್ಲಿ ತೀವ್ರ ಭೀತಿ ಸೃಷ್ಟಿಸಿದ್ದ. ದೀರ್ಘಕಾಲದಿಂದ ತಲೆಮರೆಸಿಕೊಂಡಿದ್ದ ಈತನನ್ನು ಪೊಲೀಸರು ಈ ತಿಂಗಳ ಆರಂಭದಲ್ಲಿ ಬಂಧಿಸಿದ್ದರು. ಆದರೆ, ಕಾನೂನು ಮತ್ತು ಸುವ್ಯವಸ್ಥೆಯನ್ನು ಕೈಗೆತ್ತಿಕೊಳ್ಳುವ ರೌಡಿಗಳಿಗೆ ತಕ್ಕ ಪಾಠ ಕಲಿಸಲು ಹಾಗೂ ಸಾರ್ವಜನಿಕರಲ್ಲಿ ಧೈರ್ಯ ತುಂಬಲು ಪೊಲೀಸರು ಇಂದು ಆತನನ್ನು ಸಾರ್ವಜನಿಕವಾಗಿ ಮೆರವಣಿಗೆ ನಡೆಸುವ ಮೂಲಕ ವಿಭಿನ್ನವಾಗಿ ಶಾಸ್ತಿ ಮಾಡಿದ್ದಾರೆ.
ಈ ನಡುರಸ್ತೆ ಮೆರವಣಿಗೆಯ ವಿಡಿಯೋಗಳು ಮತ್ತು ಫೋಟೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ಪೊಲೀಸರ ಈ ಸಿಂಗಂ ಶೈಲಿಯ ಕ್ರಮಕ್ಕೆ ಸಾರ್ವಜನಿಕ ವಲಯದಿಂದ ವ್ಯಾಪಕ ಶ್ಲಾಘನೆ ವ್ಯಕ್ತವಾಗುತ್ತಿದೆ.
PublicNext
25/05/2026 08:09 am
LOADING...