ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರೌಡಿಗಳ ಮನೆಗೆ ರೈಡ್ ಮಾಡಲು ಹೋದ ಖಾಕಿ ಪಡೆಯನ್ನೇ ದೈಹಿಕ ತಪಾಸಣೆ ನಡೆಸಿದ ಗ್ಯಾಂಗ್‌ಸ್ಟರ್ಸ್.!

ಪಟ್ನಾ: ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಪೊಲೀಸರೇ ಅಪರಾಧಿಗಳ ಮುಂದೆ ಅಸಹಾಯಕರಾಗಿ ಕೈಕಟ್ಟಿ ನಿಲ್ಲುವ ಅತ್ಯಂತ ನಾಚಿಕೆಗೇಡಿನ ಘಟನೆಯೊಂದು ಬಿಹಾರದ ಪಟ್ನಾ ಜಿಲ್ಲೆಯ ಮೊಕಾಮಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.

ಸಾಮಾನ್ಯವಾಗಿ ಪೊಲೀಸರು ಅಪರಾಧಿಗಳ ಅಂಗಾಂಗ ತಪಾಸಣೆ ನಡೆಸುವುದನ್ನು ನಾವು ನೋಡಿದ್ದೇವೆ, ಆದರೆ ಇಲ್ಲಿ ಉಲ್ಟಾ ನಡೆದಿದೆ! ಕುಖ್ಯಾತ ಗ್ಯಾಂಗ್‌ಸ್ಟರ್‌ಗಳಾದ ಸೋನು ಮತ್ತು ಮೋನು ಎಂಬುವವರ ಮನೆಗೆ ದಾಳಿ ಮಾಡಲು ಹೋದ ಬಿಹಾರ ಪೊಲೀಸರನ್ನೇ ಆ ರೌಡಿಗಳ ಬೆಂಬಲಿಗರು ಸಾಲಾಗಿ ನಿಲ್ಲಿಸಿ ತಪಾಸಣೆ ನಡೆಸಿದ್ದಾರೆ. ಆದರೆ, ಮನೆಗೆ ಪ್ರವೇಶಿಸುವ ಮುನ್ನ ಗ್ಯಾಂಗ್‌ಸ್ಟರ್‌ನ ಹೆನ್ಚ್‌ಮೆನ್ (ಗುಂಡಾಗಳು) ಮತ್ತು ಮನೆಯವರು ಪೊಲೀಸರನ್ನು ಗೇಟ್ ಬಳಿಯೇ ತಡೆದಿದ್ದಾರೆ.

"ನಾವು ಒಳಗೆ ಬಿಡಬೇಕಾದರೆ ಮೊದಲು ನೀವು ತಪಾಸಣೆಗೆ ಒಳಗಾಗಬೇಕು" ಎಂದು ರೌಡಿಗಳ ಬೆಂಬಲಿಗರು ಹಠ ಹಿಡಿದಿದ್ದಾರೆ. ಇದಕ್ಕೆ ಮಣಿದ ಪೊಲೀಸರು ಬೇರೆ ದಾರಿಯಿಲ್ಲದೆ ಸಾಲಾಗಿ ನಿಂತು ಆ ಗುಂಡಾಗಳಿಗೆ ತಮ್ಮ ದೇಹ ಹಾಗೂ ಜೇಬುಗಳನ್ನು ತಪಾಸಣೆ ಮಾಡಲು ಬಿಟ್ಟಿದ್ದಾರೆ. ಈ ಇಡೀ ನಾಟಕೀಯ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭೀಕರವಾಗಿ ವೈರಲ್ ಆಗಿದ್ದು, ಬಿಹಾರದ 'ಖಾಕಿ'ಯ ಗಾಂಭೀರ್ಯವನ್ನು ಸಾರ್ವಜನಿಕವಾಗಿ ಹರಾಜು ಹಾಕಿದೆ.

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಪಟ್ನಾ ಎಸ್‌ಎಸ್‌ಪಿ ಕಾರ್ತಿಕೇಯ ಶರ್ಮಾ ಅವರು ತೀವ್ರ ಕರ್ತವ್ಯ ಲೋಪ, ಶಿಸ್ತು ಉಲ್ಲಂಘನೆ ಮತ್ತು ಇಲಾಖೆಯ ಹೆಸರಿಗೆ ಮಸಿ ಬಳೆದ ಆರೋಪದ ಮೇಲೆ ದಾಳಿಯ ನೇತೃತ್ವ ವಹಿಸಿದ್ದ ಇಬ್ಬರು ಠಾಣಾಧಿಕಾರಿಗಳಾದ (SHOs) ಕುಂದನ್ ಕುಮಾರ್ ಮತ್ತು ರಂಜನ್ ಕುಮಾರ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತು (Suspend) ಮಾಡಿ ಆದೇಶ ಹೊರಡಿಸಿದ್ದಾರೆ.

Edited By :
PublicNext

PublicNext

25/05/2026 05:45 pm

Cinque Terre

9.59 K

Cinque Terre

3

ಸಂಬಂಧಿತ ಸುದ್ದಿ