ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅನಿರೀಕ್ಷಿತ ಅತಿಥಿ : ಶಾಲಾ ಪ್ರಾರ್ಥನೆಯಲ್ಲಿ 'ನಮಸ್ಕಾರ' ಮಾಡಿದ ಶ್ವಾನದ ವಿಡಿಯೋ ವೈರಲ್!

ಗ್ಯಾಂಗ್ಟೋಕ್‌ : ಸಿಕ್ಕಿಂನ ಶಾಲೆಯೊಂದರಲ್ಲಿ ಬೆಳಗ್ಗಿನ ಪ್ರಾರ್ಥನಾ ಸಮಯದಲ್ಲಿ ನಡೆದ ಅಪರೂಪದ ಘಟನೆಯೊಂದು ನೆಟ್ಟಿಗರ ಗಮನ ಸೆಳೆದಿದೆ. ಪ್ರತಿದಿನ ಶಿಸ್ತಿನಿಂದ ಸಾಲಿನಲ್ಲಿ ನಿಂತು ಪ್ರಾರ್ಥನೆಯಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳ ನಡುವೆ, ಅನಿರೀಕ್ಷಿತ ಅತಿಥಿಯಾಗಿ ಬಂದ ಬೀದಿ ನಾಯಿ ಎಲ್ಲರನ್ನು ಅಚ್ಚರಿಗೊಳಿಸಿದೆ. ಶಾಲಾ ಪ್ರಾರ್ಥನಾ ಸಮಯದಲ್ಲಿ ಮಕ್ಕಳ ಸಾಲಿನಲ್ಲಿ ಸೇರಿಕೊಂಡ ಬೀದಿ ನಾಯಿಯೊಂದು ನಮಸ್ಕಾರ ಮಾಡುವ ಭಂಗಿಯಲ್ಲಿ ನಿಂತು ಎಲ್ಲರ ಹೃದಯ ಗೆದ್ದಿದೆ ಸದ್ಯ ಗ್ಯಾಂಗ್ಟೋಕ್‌ನಿಂದ ಹೊರಬಿದ್ದ ಈ ಮುದ್ದಾದ ವಿಡಿಯೋ ವೈರಲ್ ಆಗಿದ್ದು, ಭಾರಿ ಗಮನ ಸೆಳೆಯುತ್ತಿದೆ.

ಈ ವಿಡಿಯೋ ಪ್ರಾಣಿಗಳ ಬುದ್ಧಿವಂತಿಕೆಗೆ ಸಾಕ್ಷಿಯಾಗಿದೆ. ಶಾಲಾ ಪ್ರಾರ್ಥನೆಯ ಸರಿಯಾದ ಸಮಯಕ್ಕೆ ಆಗಮಿಸಿ, ಮಕ್ಕಳಂತೆ ಸರತಿ ಸಾಲಿನಲ್ಲಿ ನಿಂತು ಅಸೆಂಬ್ಲಿಯಲ್ಲಿ ಪಾಲ್ಗೊಂಡ ಬೀದಿ ನಾಯಿ, ತನ್ನ ವಿಶಿಷ್ಟ 'ಪ್ರಾರ್ಥನಾ ಭಂಗಿ'ಯಿಂದ ಎಲ್ಲರ ಗಮನ ಸೆಳೆದಿದೆ. ಈ ಮುದ್ದಾದ ದೃಶ್ಯವನ್ನು ಪ್ರಸನ್ನ ಪಖ್ರಿನ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಮಕ್ಕಳು ಸಾಲಿನಲ್ಲಿ ನಿಂತಿರುವುದನ್ನು ಕಾಣಬಹುದು, ಅವರ ನಡುವೆ ಅನಿರೀಕ್ಷಿತವಾಗಿ ಸೇರಿಕೊಂಡ ಈ ಬೀದಿ ನಾಯಿ, ಪ್ರಾರ್ಥನಾ ಭಂಗಿಯಲ್ಲಿ ನಿಂತು ಎಲ್ಲರನ್ನು ವಿಸ್ಮಯಗೊಳಿಸಿದೆ.

ಮೈದಾನದಲ್ಲಿ ಶಾಲಾ ಮಕ್ಕಳು ಶಿಸ್ತಿನಿಂದ ಸಾಲಾಗಿ ನಿಂತು ಬೆಳಗಿನ ಪ್ರಾರ್ಥನಾ ಗೀತೆಯನ್ನು ಹಾಡುತ್ತಿದ್ದಾಗ, ಬಿಳಿ ಬಣ್ಣದ ಈ ಬೀದಿ ನಾಯಿ ತನ್ನ ಹಿಂಗಾಲುಗಳ ಮೇಲೆ ನೇರವಾಗಿ ನಿಂತು, ಮುಂಭಾಗದ ಪಂಜಗಳನ್ನು ಮೇಲಕ್ಕೆತ್ತಿ ಪ್ರಾರ್ಥನೆಯಲ್ಲಿ ಭಾಗವಹಿಸಿದೆ. ಪ್ರಾರ್ಥನೆ ಮುಗಿಯುತ್ತಿದ್ದಂತೆ, ಅದು ಅತ್ಯಂತ ಸಹಜವಾಗಿ ಮಕ್ಕಳ ಪಕ್ಕದಲ್ಲೇ ಆರಾಮವಾಗಿ ಕುಳಿತುಕೊಂಡಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ನಾಯಿಯ ಈ ಶಾಂತ ಮತ್ತು ಶಿಸ್ತಿನ ನಡವಳಿಕೆ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹಲವರು, "ಈ ನಾಯಿ ಶಾಲಾ ಮಕ್ಕಳಿಗಿಂತಲೂ ಹೆಚ್ಚು ಶಿಸ್ತು ಪಾಲಿಸುತ್ತಿದೆ" ಎಂದು ಬರೆದಿದ್ದಾರೆ. ಮತ್ತೊಬ್ಬರು, "ಇದು ನಮ್ಮ ಶಾಲಾ ದಿನಗಳನ್ನು ನೆನಪಿಸುವಂತೆ ಮಾಡಿದೆ" ಎಂದು ಭಾವುಕವಾಗಿ ಪ್ರತಿಕ್ರಿಯಿಸಿದ್ದಾರೆ.

Edited By :
PublicNext

PublicNext

25/05/2026 08:50 pm

Cinque Terre

8.29 K

Cinque Terre

0

ಸಂಬಂಧಿತ ಸುದ್ದಿ