ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಿನ ಭವಿಷ್ಯ : 22.5.2026

ಮೇಷ: ತಾಂತ್ರಿಕ ಕ್ಷೇತ್ರದ ಉಪನ್ಯಾಸಕರಿಗೆ ಪ್ರಗತಿ. ದೈನಂದಿನ ಕೆಲಸಕಾರ್ಯಗಳಲ್ಲಿ ಸೋಮಾರಿತನ ಬಿಡಿ. ಸ್ನೇಹಿತರಿಂದ ಧನಾಗಮನ.

ವೃಷಭ: ವಸ್ತ್ರವ್ಯಾಪಾರದಲ್ಲಿ ಸಾಮಾನ್ಯ ಲಾಭ. ಕೋರ್ಟ್ ವ್ಯವಹಾರಗಳಲ್ಲಿ ಜಯ. ಸ್ತ್ರೀಯರಿಗೆ ಅಯಾಚಿತವಾಗಿ ಪದವಿ ಸಿಗಲಿದೆ.

ಮಿಥುನ: ಮುಖ್ಯವಾದ ಕೆಲಸ ಅಂತಿಮ ಹಂತಕ್ಕೆ ಬರಲಿದೆ. ಹಿರಿಯರಿಂದ ಮನೆ ಕಟ್ಟಲು ನೆರವು. ಉದ್ಯೋಗದ ಅತಂತ್ರ ಸ್ಥಿತಿ ಬದಲಾಗಲಿದೆ.

ಕಟಕ: ಮಾನಸಿಕ ಒತ್ತಡ ಕಡಿಮೆಯಾಗಲಿದೆ. ನಿಮ್ಮ ಕೆಲವೊಂದು ನಿರ್ಧಾರಗಳನ್ನು ಪುನರ್ ಪರಿಶೀಲಿಸಿ. ಆಸ್ತಿ ವಿವಾದಕ್ಕೆ ತಾರ್ಕಿಕ ಅಂತ್ಯ.

ಸಿಂಹ: ಕುಟುಂಬದಲ್ಲಿ ವಾದ-ವಿವಾದ ಉಂಟಾಗಬಹುದು. ನೂತನ ಗೃಹಪ್ರವೇಶಕ್ಕೆ ಸಿದ್ಧತೆ. ಪೊಲೀಸ್ ಅಧಿಕಾರಿಗಳಿಗೆ ತಾಳ್ಮೆ ಅಗತ್ಯ.

ಕನ್ಯಾ: ಅಸಹಾಯಕರಿಗೆ ಸಹಾಯ ಮಾಡುವಿರಿ. ಗೃಹ ನಿರ್ಮಾಣದಲ್ಲಿ ಅಡ್ಡಿ ಆತಂಕ ನಿವಾರಣೆ. ಸರ್ಕಾರಿ ಉದ್ಯೋಗಿಗೆ ವರ್ಗಾವಣೆ.

ತುಲಾ: ಹಳೇ ಸ್ನೇಹಿತನೊಂದಿಗೆ ತೀರ್ಥಯಾತ್ರೆ. ವಾಹನಕ್ಕೆ ಖರ್ಚು. ಹೋಟೆಲ್ ಉದ್ಯಮದಲ್ಲಿ ಲಾಭ. ಋಣಮುಕ್ತರಾಗಲು ಅವಕಾಶ.

ವೃಶ್ಚಿಕ: ತೆರಿಗೆ ಇಲಾಖೆಯ ಉದ್ಯೋಗಿಗಳಿಗೆ ವರ್ಗಾವಣೆ. ಸರ್ಕಾರಿ ಹರಾಜಿನಲ್ಲಿ ಭಾಗವಹಿಸುವಿರಿ. ವಿವಾಹ ಸಮಾರಂಭಕ್ಕೆ ಚಾಲನೆ.

ಧನು: ದೃಢ ನಿರ್ಧಾರ ತೆಗೆದುಕೊಳ್ಳುವಲ್ಲಿ ಗೊಂದಲ. ಪರಿಶ್ರಮಕ್ಕೆ ತಕ್ಕ ಪುರಸ್ಕಾರ ಸಿಗಲಿದೆ. ಆಹಾರ ಧಾನ್ಯಗಳ ವರ್ತಕರಿಗೆ ಧನ ಲಾಭ.

ಮಕರ: ಆಲಸ್ಯ ಕಡಿಮೆ ಮಾಡಿಕೊಳ್ಳಿ. ನವವಿವಾಹಿತರಿಗೆ ಶುಭ ಸುದ್ದಿ ಸಿಗಲಿದೆ. ವಿರೋಧಿಗಳಿಂದ ರಾಜಕಾರಣದಲ್ಲಿ ಪದವಿ ಕೈತಪ್ಪಲಿದೆ.

ಕುಂಭ: ಕುಟುಂಬದಲ್ಲಿ ಆಸ್ತಿ ಮಾರಾಟಕ್ಕೆ ಸದಸ್ಯರ ಒಲವು. ವಾತ ಸಂಬಂಧಿ ರೋಗ ಗುಣವಾಗಲಿದೆ. ಅನಗತ್ಯ ಅಲೆದಾಟ ಆದೀತು.

ಮೀನ: ಬ್ಯಾಂಕಿನಲ್ಲಿ ನಿಮ್ಮ ನಿರೀಕ್ಷೆಯ ಸಾಲ ಸಿಗಲಿದೆ. ಕಚೇರಿಯ ಸ್ಥಳ ಬದಲಾವಣೆ. ಅಲಂಕಾರಿಕ ವಸ್ತುಗಳ ವ್ಯಾಪಾರದಲ್ಲಿ ಲಾಭ

Edited By : Nirmala Aralikatti
PublicNext

PublicNext

22/05/2026 07:24 am

Cinque Terre

26.51 K

Cinque Terre

0