ಬೆಳಗಾವಿ: ಜಿಲ್ಲೆಯ ಹುಕ್ಕೇರಿಯಲ್ಲಿ ಕಳೆದ ನಾಲ್ಕು ದಿನಗಳಿಂದ ನೀರಾವರಿ ಯೋಜನೆಗಾಗಿ ಆಗ್ರಹಿಸಿ ನಡೆಯುತ್ತಿದ್ದ ರೈತ ಹೋರಾಟಕ್ಕೆ ಸರ್ಕಾರ ಮಣಿದಿದೆ. ರೈತರ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ರೈತರು ತಮ್ಮ ಪ್ರತಿಭಟನೆಯನ್ನು ಹಿಂಪಡೆದಿದ್ದಾರೆ.
ಈ ನಡುವೆ, ಬಬಲೇಶ್ವರ ಕ್ಷೇತ್ರದ ಶಾಸಕರು ಹಾಗೂ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ. ಬಿ. ಪಾಟೀಲ್ ಅವರು ರೈತರಿಗಾಗಿ ಅನುಷ್ಠಾನಗೊಳಿಸಿದ ನೀರಾವರಿ ಯೋಜನೆಯನ್ನು ಉಲ್ಲೇಖಿಸಿ ರೈತ ಮುಖಂಡ ಶಶಿಕಾಂತ ಪಡಸಲಗಿ ನೀಡಿರುವ ಹೇಳಿಕೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
"ಸಚಿವ ಎಂ. ಬಿ. ಪಾಟೀಲ್ ಅವರು ರೈತರಿಗಾಗಿ ನೀರಾವರಿ ಯೋಜನೆ ಮಾಡಿದ್ದರಿಂದ ರೈತರು ಅವರ ತುಲಾಭಾರ ಕಾರ್ಯಕ್ರಮ ಮಾಡಿದ್ದಾರೆ. ಆ ರೀತಿ ನೀವು ಮಾಡಿ, ನಿಮಗೂ ನಮ್ಮ ರೈತರು ತುಲಾಭಾರ ಕಾರ್ಯ ಮಾಡುತ್ತಾರೆ" ಎಂದು ಇತರೆ ರಾಜಕಾರಣಿಗಳಿಗೆ ಕಿವಿಮಾತು ಹೇಳಿದ್ದಾರೆ.
PublicNext
24/05/2026 02:49 pm
LOADING...