ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

BREAKING: ಮತ್ತೊಮ್ಮೆ ಏರಿದ ಪೆಟ್ರೋಲ್-ಡೀಸೆಲ್ ಬೆಲೆ

ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ಹಾಗೂ ಹಾರ್ಮುಜ್ ಜಲಸಂಧಿಯ (Strait of Hormuz) ಅನಿಶ್ಚಿತತೆಗಳಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಉಂಟಾಗಿರುವ ಅಲ್ಲೋಲಕಲ್ಲೋಲದ ಪರಿಣಾಮವಾಗಿ ದೇಶದಲ್ಲಿ ಇಂಧನ ಬೆಲೆಗಳು ಮತ್ತೊಮ್ಮೆ ಗಗನಕ್ಕೇರಿವೆ. ಸೋಮವಾರ (ಇಂದು) ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಭಾರಿ ಏರಿಕೆ ಮಾಡಲಾಗಿದ್ದು, ಕೇವಲ ಹತ್ತು ದಿನಗಳ ಅವಧಿಯಲ್ಲಿ ಇದು ನಾಲ್ಕನೇ ದರ ಏರಿಕೆಯಾಗಿದೆ.

ಇತ್ತೀಚಿನ ಮಾಹಿತಿ ಪ್ರಕಾರ, ದೇಶದ ರಾಜಧಾನಿ ದೆಹಲಿಯಲ್ಲಿ ಇಂಧನ ದರಗಳು ಗಣನೀಯವಾಗಿ ಹೆಚ್ಚಳವಾಗಿವೆ. ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ ₹2.61 ಏರಿಕೆಯಾಗಿದ್ದು, ₹99.51 ರಿಂದ ₹102.12 ಕ್ಕೆ ತಲುಪಿದೆ. ಅದೇ ರೀತಿ, ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ ₹2.71 ಹೆಚ್ಚಳವಾಗಿದ್ದು, ₹92.49 ರಿಂದ ₹95.20 ಕ್ಕೆ ಏರಿಕೆಯಾಗಿದೆ.

ಕಳೆದ ಮೇ 15 ರಂದು ಸುದೀರ್ಘ ಅವಧಿಯ ನಂತರ ಮೊದಲ ಬಾರಿಗೆ ಇಂಧನ ದರಗಳನ್ನು ಪರಿಷ್ಕರಿಸಲಾಗಿತ್ತು. ಅಂದಿನಿಂದ ಎಂಟೇ ದಿನಗಳಲ್ಲಿ ಇದು ಮೂರನೇ ಬಾರಿಯ ಏರಿಕೆಯಾಗಿದ್ದು, ಕಳೆದ ಶನಿವಾರವಷ್ಟೇ ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳು (OMCs) ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ತಲಾ ಸುಮಾರು ₹1 ರಷ್ಟು ಹೆಚ್ಚಿಸಿದ್ದವು. ಇದೀಗ ಸೋಮವಾರ ಮತ್ತೆ ದರ ಏರಿಸುವ ಮೂಲಕ ಗ್ರಾಹಕರಿಗೆ ದೊಡ್ಡ ಆಘಾತ ನೀಡಿವೆ.

Edited By : Nagaraj Tulugeri
PublicNext

PublicNext

25/05/2026 07:11 am

Cinque Terre

15.92 K

Cinque Terre

6

ಸಂಬಂಧಿತ ಸುದ್ದಿ