ಬೆಂಗಳೂರು:ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನಿರ್ವಹಿಸುತ್ತಿರುವ BIAL ಸಂಸ್ಥೆಯಲ್ಲಿ KSIIDC ಹೊಂದಿರುವ 13% ಹೂಡಿಕೆಗೆ 2025–26ನೇ ಸಾಲಿನಲ್ಲಿ ₹16.49 ಕೋಟಿ ಲಾಭಾಂಶ ಲಭಿಸಿದ್ದು, ಲಾಭಾಂಶದ ಚೆಕ್ ಅನ್ನು ಕಾವೇರಿ ನಿವಾಸದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹಸ್ತಾಂತರಿಸಲಾಯಿತು.
KSIIDC ಪರವಾಗಿ BIAL ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಹರಿ ಕೆ ಮರಾರ್ ಅವರು ಚೆಕ್ ಹಸ್ತಾಂತರಿಸಿದರು. ಬೃಹತ್ ಮತ್ತು ಮಧ್ಯಮ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವರಾದ ಎಂ ಬಿ ಪಾಟೀಲ್, ಸರ್ಕಾರದ ಮುಖ್ಯ ಕಾರ್ಯದರ್ಶಿಯವರಾದ ಡಾ. ಶಾಲಿನಿ ರಜನೀಶ್ ಹಾಗೂ KSIIDC ಯ ವ್ಯವಸ್ಥಾಪಕ ನಿರ್ದೇಶಕರಾದ ಖುಷ್ಬೂ ಗೋಯಲ್ ಚೌಧರಿ ಉಪಸ್ಥಿತರಿದ್ದರು.
PublicNext
25/05/2026 03:25 pm
LOADING...