ನವಲಗುಂದ: ಪ್ರಾಣಿ ಪಕ್ಷಿ ತಮ್ಮ ಆಹಾರ ಬಯಸಿ ನಾಡಿನೆಡೆಗೆ ಬರುವುದು ಸರ್ವೇ ಸಾಮಾನ್ಯ ಆದರೆ ಶ್ವಾನದ ದಾಳಿಗೆ ಸಿಲುಕಿ ಪ್ರಾಣಾಪಾಯದಿಂದ ಜಿಂಕೆಯೊಂದು ಪಾರಾದ ಘಟನೆ ಜರುಗಿದೆ.
ಹೌದು...ನಗರದ ಬಸವೇಶ್ವರ ನಗರದಲ್ಲಿ ಸುಮಾರು ಐದು ಗಂಟೆ ಹೊತ್ತಿಗೆ ಜಿಂಕೆಯೊಂದು ಕಂಡು ಬಂದಿದ್ದು, ಅದರ ಮೇಲೆ ಶ್ವಾನಗಳು ಕ್ರೂರವಾಗಿ ದಾಳಿ ನಡೆಸಿ ಚರಂಡಿಯಲ್ಲಿ ಒಗೆದಿವೆ. ಮೊದಲೇ ಆ ಜಿಂಕೆಯು ಗರ್ಭಿಣಿ ಇರುವ ಕಾರಣ ಓಡಲು ಆಗಲು ಸಿಲುಕಿಕೊಂಡಿದೆ. ಜಿಂಕೆಯ ಹಿಂಬದಿ ತೀವ್ರ ಗಾಯಗಳಾಗಿದ್ದು, ಕೂಡಲೇ ಸ್ಥಳೀಯರು ಶ್ವಾನಗಳಿಂದ ಜಿಂಕೆಯನ್ನು ರಕ್ಷಣೆ ಮಾಡಿದ್ದಾರೆ.
ನಂತರ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಪಶು ವೈದ್ಯಕೀಯ ಸಿಬ್ಬಂದಿ ಜಿಂಕೆಗೆ ವೈದ್ಯೋಪಚಾರ ಮಾಡಿ ತಮ್ಮ ಇಲಾಖೆಯ ಸುಪರ್ದಿಗೆ ಪಡೆದುಕೊಂಡಿದ್ದಾರೆ.
- ಶಂಕರಯ್ಯ ಸುಭೇದಾರಮಠ, ಪಬ್ಲಿಕ್ ನೆಕ್ಸ್ಟ್ ನವಲಗುಂದ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
27/05/2026 07:32 pm
LOADING...