ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ ಧಾರವಾಡದಲ್ಲಿ ಪ್ರೈವೇಟ್ ಬಸ್ ಹಾವಳಿ; ಜೋತು ಬಿದ್ದು ಪ್ರಯಾಣ; ಕಣ್ಮುಚ್ಚಿ ಕುಳಿತ RTO ಅಧಿಕಾರಿಗಳು

ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡದಲ್ಲಿ ಖಾಸಗಿ ಬಸ್‌ಗಳು ತಲೆ ಎತ್ತಿ ನಿಂತಿವೆ. ಯಾವುದೇ ರೂಲ್ಸ್ ಕೂಡ ಪಾಲಿಸದೆ ಬೇಕಾಬಿಟ್ಟಿಯಾಗಿ ವಾಹನ ಚಲಾವಣೆ ಮಾಡ್ತಿರೋ ಆರೋಪ ಕೇಳಿ ಬರುತ್ತಿವೆ. ಈಗ ರಾಜಕುಮಾರ ಟ್ರಾವೆಲ್ಸ್ ಬಸ್‌ನಲ್ಲಿ ಪ್ರಯಾಣಿಕರು ಬಾಗಿಲಲ್ಲಿ ಜೋತು ಬಿದ್ದು ಪ್ರಯಾಣ ಮಾಡ್ತಿರೋ ವಿಡಿಯೋ ಪಬ್ಲಿಕ್ ನೆಕ್ಸ್ಟ್‌ಗೆ ಲಭ್ಯವಾಗಿದೆ.

ಹೌದು,,, ಧಾರವಾಡದಿಂದ ಹುಬ್ಬಳ್ಳಿ ಕಡೆಗೆ ಬರುವ ಬಸ್‌ನಲ್ಲಿ ಬಾಗಿಲಿಗೆ ಜನರ ಜೋತು ಬಿದ್ದಿದ್ದಾರೆ. ಈ ದೃಶ್ಯ ವಿದ್ಯಾನಗರ ಆರ್ಟ್ಸ್ ಕಾಲೇಜು ರಸ್ತೆಯಲ್ಲಿ ಕಂಡು ಬಂದಿದೆ. ಹೀಗೆ ರೂಲ್ಸ್ ಮೀರುತ್ತಿರುವ ಇಂತಹ ಖಾಸಗಿ ಬಸ್ ಮೇಲೆ RTO ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆರೋಪ ಕೂಡ ಕೇಳಿ ಬರುತ್ತಿದೆ. RTO ಅಧಿಕಾರಿಗಳ ಬಡವರ ವಾಹನ ಹಿಡಿಯುವುದನ್ನು ಬಿಟ್ಟು ಇಂತಹ ಬಸ್‌ಗಳ ಮೇಲೆ ಕ್ರಮ ಕೈಗೊಳ್ಳಿ..

ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

28/05/2026 05:10 pm

Cinque Terre

30.01 K

Cinque Terre

7

ಸಂಬಂಧಿತ ಸುದ್ದಿ