ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: 215 ಕೋಟಿ ರೂ. ವೆಚ್ಚದಲ್ಲಿ ಯಲ್ಲಮ್ಮ ದೇವಸ್ಥಾನದ ಅಭಿವೃದ್ಧಿ ಕಾಮಗಾರಿಗೆ ಶೀಘ್ರ ಚಾಲನೆ - ವಿಶ್ವಾಸ ವೈದ್ಯ

ಬೆಳಗಾವಿ: ಸವದತ್ತಿ ಯಲ್ಲಮ್ಮ ದೇವಸ್ಥಾನದ ಅಭಿವೃದ್ಧಿ ಕಾಮಗಾರಿ ಸಿಎಂ ಅವರನ್ನು ಕೇಳಿ ಶೀಘ್ರದಲ್ಲೇ ಚಾಲನೆ ನೀಡುತ್ತೇವೆ ಎಂದು ಸವದತ್ತಿ ಶಾಸಕ ವಿಶ್ವಾಸ ವೈದ್ಯ ಅವರು ತಿಳಿಸಿದರು

ಬುಧವಾರ ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸವದತ್ತಿ ಯಲ್ಲಮ್ಮ ಪ್ರಾಧಿಕಾರಕ್ಕೆ 215 ಕೋಟಿ ಅನುದಾನ ಬಿಡುಗಡೆಯಾಗಿ ಟೆಂಡರ್ ಕೂಡ ಆಗಿದೆ. ಶಂಕು ಸ್ಥಾಪನೆ ಮಾಡಲು ಸಿಎಂ ಅವರನ್ನು ಕೇಳಿ ದಿನಾಂಕ ನಿಗದಿ ಮಾಡಲು ಡಿಸಿ ಜೊತೆ ಸಭೆ ಮಾಡಲಾಗಿದೆ. ಶನಿವಾರ ಅಥವಾ ಸೋಮವಾರ ಬೆಂಗಳೂರಿಗೆ ಹೋಗಿ ಸಿಎಂ ಅವರ ಹತ್ತಿರ ದಿನಾಂಕ ನಿಗದಿ ಮಾಡಲಿದ್ದೇವೆ.‌

ದೇವಸ್ಥಾನದ ಅಭಿವೃದ್ಧಿ ಹೇಗೆ ಮಾಡಬೇಕು ಎಂದು ಮಾಸ್ಟರ್ ಪ್ಲಾನ್ ಕೂಡಾ ಸಿದ್ಧ ಆಗಿದೆ. 215 ಕೋಟಿ ಪೈಕಿ 180 ಕೋಟಿಯ ಟೆಂಡರ್ ಆಗಿದ್ದು, ಉಳಿದ 30 ಕೋಟಿಯಲ್ಲಿ ಏನು ಮಾಡಬೇಕು ಎಂದು ಡಿಪಿಆರ್ ಸಿದ್ಧವಾಗುತ್ತಿದೆ ಎಂದು ಶಾಸಕ ವಿಶ್ವಾಸ ವೈದ್ಯ ಅವರು ತಿಳಿಸಿದರು.

Edited By : Manjunath H D
PublicNext

PublicNext

27/05/2026 10:33 pm

Cinque Terre

19.79 K

Cinque Terre

1

ಸಂಬಂಧಿತ ಸುದ್ದಿ