ಬೆಳಗಾವಿ: ಅತ್ಯಾಧುನಿಕ ಸೌಲಭ್ಯಗಳೊಂದಿಗೆ ನಿರ್ಮಿತವಾಗಿರುವ ಶ್ರೀ ಎಸ್ ಎಸ್ ಜಂಬಗಿ ಮೆಮೋರಿಯಲ್ ಎಜುಕೇಶನ್ ಅಂಡ್ ಚಾರಿಟೇಬಲ್ ಟ್ರಸ್ಟ್‌ನ ಜಂಬಗಿ ಸೂಪರ್ ಸ್ಪೆಷಾಲಿಟಿ ನೇತ್ರ ಸಂಸ್ಥೆ ಮತ್ತು ಬೆಳಗಾವಿ ಲೇಸರ್ ಅಂಡ್ ಕಾಂಟ್ಯಾಕ್ಟ್ ಲೆನ್ಸ್ ಕ್ಲಿನಿಕ್ ಜನರಿಗೆ ಗುಣಮಟ್ಟದ ಸೇವೆ ನೀಡಲು ಮುಂದಾಗಿದೆ.
ಗುಣಮಟ್ಟದ ಕಣ್ಣಿನ ಚಿಕಿತ್ಸೆ ನೀಡಲು ಒಂದೇ ಸೂರಿನಡಿ ವರ್ಲ್ಡ್ ಮೋಸ್ಟ್ ಅಡ್ವಾನ್ಸ್ಡ್ ಇಕ್ವಿಪ್ಮೆಂಟ್ಸ್ ನೊಂದಿಗೆ
ಜಂಬಗಿ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಕಾರ್ಯಾರಂಭಿಸಿದೆ. ಎಲ್ಲಾ ವರ್ಗದ ಜನರಿಗೆ ನೇತ್ರ ಸಂಬಂಧಿತ ಕಾಯಿಲೆಗಳಿಗೆ ಸಮಗ್ರವಾದ ಚಿಕಿತ್ಸೆ ಹಾಗೂ ಶಸ್ತ್ರಚಿಕಿತ್ಸಾ ಸೇವೆಗಳನ್ನು ಒದಗಿಸಲಿದೆ.
ಕಣ್ಣಿನ ಪೊರೆ, ಕಾರ್ನಿಯಲ್, ರೆಟಿನಾದ ಕಾಯಿಲೆಗಳು, ಗ್ಲುಕೋಮಾ, ಚಿಕ್ಕಮಕ್ಕಳ ನೇತ್ರವಿಜ್ಞಾನ, ಆಕ್ಯುಲೋಪ್ಯಾಸ್ಟ್ರಿ, ನರ-ನೇತ್ರವಿಜ್ಞಾನ ಶಸ್ತ್ರಚಿಕಿತ್ಸೆ ಸೇರಿದಂತೆ ಕಣ್ಣಿನ ರಚನೆಯ ಸಂಪೂರ್ಣ ಕಾಯಿಲೆಗಳಿಗೆ ಸಮಗ್ರವಾದ ಆರೈಕೆ ನೀಡಲಿದೆ. ವಯೋಸಹಜ ಕಣ್ಣಿನ ತೊಂದರೆ, ಡಿಜಿಟಲ್ ಸಾಧನ ಬಳಸಿ ಕಣ್ಣಿನ ಹಾನಿಯನ್ನು ತಡೆಯಲು ಒಣಕಣ್ಣು ಹಾಗೂ ಕಾಂಟ್ಯಾಕ್ಟ್ ಲೆನ್ಸ್ ಕ್ಲಿನಿಕ್ ಅನ್ನು ಆಸ್ಪತ್ರೆಯಲ್ಲಿ ಮೀಸಲಿಡಲಾಗಿದೆ.
ಮುಖ್ಯವಾಗಿ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ನೆರವೇರಿಸುವುದಕ್ಕಾಗಿ ರೋಬೋಟಿಕ್ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದ್ದು, ಫ್ಯಾಕೋಎಮುಲಿಸಿಫಿಕೇಶನ್ ವ್ಯವಸ್ಥೆ ಮತ್ತು ಕಾರ್ನಿಯಲ್ ಪ್ರಕ್ರಿಯೆಗಳಿಗಾಗಿ ಅತ್ಯಾಧುನಿಕ ZEISS MEL 90 ಎಕ್ಸೆಮರ್ ಲೇಸರ್ ಯಂತ್ರವನ್ನು ಅಳವಡಿಸಿಕೊಳ್ಳಲಾಗಿದೆ. ಈ ತಂತ್ರಜ್ಞಾನವು ಆಯ್ದ ರೋಗಿಗಳ ಶಸ್ತ್ರಚಿಕಿತ್ಸೆಯಲ್ಲಿ ಅತ್ಯಂತ ಪರಿಣಾಮಕಾರಿಯಾಗಿದ್ದು, ಕಡಿಮೆ ನೋವು, ಪರಿಣಾಮಕಾರಿಯಾದ ಶಸ್ತ್ರಚಿಕಿತ್ಸೆ, ಶೀಘ್ರ ದೃಶ್ಯವು ಮರುಕಳಿಸುವಲ್ಲಿ ಸಹಕಾರಿಯಾಗಿದೆ.
ಅತ್ಯಾಧುನಿಕ ರೋಬೋಟಿಕ್ ಹಾಗೂ ಲೇಸರ ಚಿಕಿತ್ಸೆಗಾಗಿ ಈ ಭಾಗದ ಜನರು ದೂರದ ನಗರಗಳಿಗೆ ಅಲೆದಾಡುವುದನ್ನು ತಪ್ಪಿಸುವುದಕ್ಕಾಗಿಯೇ ಒಂದೇ ಸೂರಿನಡಿ ನೇತ್ರ ಸಂಬಂಧಿತ ಕಾಯಿಲೆಗಳಿಗೆ ಸಮಗ್ರವಾದ ಶಸ್ತ್ರಚಿಕಿತ್ಸೆ ಹಾಗೂ ಆರೈಕೆ ನೀಡುವುದನ್ನು ಮುಖ್ಯ ಧ್ಯೇಯವಾಗಿ ಇಟ್ಟುಕೊಂಡು ಸಮಾಜದ ಹಿತದೃಷ್ಟಿಯಿಂದ ಸೇವೆಯನ್ನು ನೀಡಲಾಗುತ್ತಿದೆ. ಪ್ರಸಕ್ತ ಸಮಯದ ನೇತ್ರ ಆರೈಕೆಯನ್ನು ಸ್ಥಳೀಯವಾಗಿ ಲಭ್ಯವಾಗುವಂತೆ ಮಾಡುವುದು, ತಂತ್ರಜ್ಞಾನ ಆಧಾರಿತ ಸಾಕ್ಷಾಧಾರಗಳೊಂದಿಗೆ ನಿಯಮಾವಳಿಗೆ ಅನುಗುಣವಾಗಿ ರೋಗಿ ಕೇಂದ್ರಿತ ಆರೈಕೆಯೇ ಮುಖ್ಯ ಗುರಿಯಾಗಿದೆ.
ಈ ಸಂಸ್ಥೆಯಲ್ಲಿ ನುರಿತ ಅನುಭವಿ ತಜ್ಞವೈದ್ಯರಾದ ಡಾ. ಜಗದೀಶ್ ಪಾಟೀಲ, ಡಾ. ಹೇಮಂತ, ಡಾ. ಸ್ನೇಹಾ ಬಾಂದುರ್ಗೆ ಹಾಗೂ ಡಾ. ಮಿತಾಲಿ ಶಾ ಸೇರಿದಂತೆ ಇನ್ನಿತರರು ಆರೋಗ್ಯ ಸೇವೆ ನೀಡಲಿದ್ದಾರೆ. ಕಣ್ಣಿನ ಆರೋಗ್ಯಕ್ಕೆ ಸಂಬಂಧಿಸಿದ ಈ ತಂಡವು ಎಲ್ಲ ಹಂತದ ಕಾಯಿಲೆಗಳನ್ನು ಸಮಗ್ರವಾದ ತಪಾಸಣೆಗಳೊಂದಿಗೆ ಅತ್ಯುತ್ತಮವಾದ ಚಿಕಿತ್ಸೆ ಹಾಗೂ ಕಾಳಜಿ ವಹಿಸಲಿದೆ. ರೋಗಗಳ ಮನೆಬಾಗಿಲಿಗೆ ಆರೋಗ್ಯ ಸೇವೆಯನ್ನು ನೀಡಲು ಅತ್ಯಾಧುನಿಕ ಅಂಬ್ಯುಲೆನ್ಸ್ ಸೇವೆ ಕಲ್ಪಿಸಲಾಗಿದೆ.
ಆಸ್ಪತ್ರೆಯಲ್ಲಿ ಇನ್ಸುರೆನ್ಸ್, ಸರ್ಕಾರದ ಯೋಜನೆಗಳು ಕೂಡ ಲಭ್ಯ ಇದೆ.
ಈ ಭಾಗದಲ್ಲಿ ಕಣ್ಣಿನ ಆರೋಗ್ಯ ರಕ್ಷಣೆಗಾಗಿಯೇ ಪ್ರತ್ಯೇಕವಾದ ಆಸ್ಪತ್ರೆ ನಿರ್ಮಾಣವಾಗಿರುವುದರಿಂದ ಆರೋಗ್ಯ ಸುಧಾರಣೆಗೆ ಹೆಚ್ಚು ಒತ್ತು ನೀಡಲಾಗಿದೆ. ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕ ಹಾಗೂ ದಕ್ಷಿಣ ಮಹಾರಾಷ್ಟ್ರದ ಜನತೆಯ ಕಣ್ಣಿನ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸಲಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಮೊಬೈಲ್ ಸಂಖ್ಯೆ 8229008221 ಹಾಗೂ 8229008225
ಅಥವಾ ಆಸ್ಪತ್ರೆಯ ವಿಳಾಸ
ಜಂಬಗಿ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ
ಕೊಲ್ಲಾಪುರ ಸರ್ಕಲ್ ಹತ್ತಿರ, ನೆಹರು ನಗರ... 590010
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
02/06/2026 05:21 pm