ಹುಬ್ಬಳ್ಳಿ: ಹುಬ್ಬಳ್ಳಿಯ ಚಿಟಗುಪ್ಪಿ ಆಸ್ಪತ್ರೆ ಬಡವರ ಪಾಲಿನ ಸಂಜೀವಿನಿ ಎಂದೇ ಖ್ಯಾತಿ ಪಡೆಯುತ್ತಿದೆ. ಇಲ್ಲಿನ ವೈದ್ಯರು ಅದೆಷ್ಟೋ ಕ್ಲಿಷ್ಟಕರ ಶಸ್ತ್ರ ಚಿಕಿತ್ಸೆ ಮಾಡಿ ಮಹಿಳೆಯರ ಜೀವ ಉಳಿಸಿದ್ದಾರೆ. ಅದೇ ರೀತಿ ಕೂಡ ಯಾರು ಇಲ್ಲದ ಅನಾಥ ಬಡ ಮಹಿಳೆ ಫೈಬ್ರಾಯ್ಡ್‌ನಿಂದ ಬಳಲುತ್ತಿದ್ದಳು. ಡಾ. ಶ್ರೀಧರ್ ದಂಡೆಪ್ಪನವರ ಅವರು ಸಿಂಗಲ್ ಹೋಲ್ ಹಾಕಿ ಶಸ್ತ್ರ ಚಿಕಿತ್ಸೆ ಮಾಡುವುದರ ಮೂಲಕ ಮಹಿಳೆಯ ಜೀವ ಉಳಿಸಿದ್ದಾರೆ.
ಹೌದು,,, ಹುಬ್ಬಳ್ಳಿಯ ನಿವಾಸಿ ಮಹಾದೇವಿ ಎಂಬ ಮಹಿಳೆ ಮನೆ ಕೆಲಸ ಮಾಡುತ್ತ ತನ್ನ ಜೀವನ ನಡೆಸುತ್ತಿದ್ದಳು. ಮೂರು ವರ್ಷಗಳಿಂದ ಗಂಡ ತೀರಿಹೋಗಿದ್ದಾರೆ. ಬದುಕಿಗಾಗಿ ಅವರಿವರ ಮನೆ ಕೆಲಸ ಮಾಡಿಕೊಂಡು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಳು. ಆದ್ರೆ ವಿಧಿಯಾಟ ಹೊಟ್ಟೆಯಲ್ಲಿ ಫೈಬ್ರಾಯ್ಡ್ ಗಂಟು ಆಗಿ ನಿರಂತರ ರಕ್ತಸ್ರಾವ ಆಗುತ್ತಿತ್ತು. ಬೇರೆ ಬೇರೆ ಆಸ್ಪತ್ರೆಗೆ ತೋರಿಸಿದರೂ ಹೆಚ್ಚಿನ ಹಣ ಕೇಳಿದ್ದಕ್ಕೆ ಮಹಿಳೆ ಮೌನವಾಗಿದ್ದಳು. ಒಂದು ದಿನ ಚಿಟಗುಪ್ಪಿ ಆಸ್ಪತ್ರೆಗೆ ಭೇಟಿ ನೀಡಿದ್ದಾಳೆ. ಅವರನ್ನು ಡಾ. ಶ್ರೀಧರ್ ದಂಡೆಪ್ಪನವರ ಚೆಕ್ ಮಾಡಿದ ಕೂಡಲೆ ತಿಳಿಯಿತು ಇದು ಫೈಬ್ರಾಯ್ಡ್ ಆಗಿದ್ದೂ, ಕೂಡಲೇ ಆಪರೇಷನ್‌ಗೆ ತೆಗೆದುಕೊಂಡು ಬರೋಬ್ಬರಿ ಒಂದು ಕೆ.ಜಿ ಮೇಲೆ ಕ್ಯಾನ್ಸರ್ ಗಡ್ಡೆ ತೆಗೆದಿದ್ದಾರೆ. ಈಗ ಆ ಮಹಿಳೆ ಆರಾಮವಾಗಿದ್ದು, ವೈದ್ಯರನ್ನು ದೇವರಂತೆ ಪೂಜಿಸುತ್ತಿದ್ದಾಳೆ.
ಇನ್ನು ಈ ಕ್ಲಿಷ್ಟಕರ ಶಸ್ತ್ರಚಿಕಿತ್ಸೆಯಲ್ಲಿ ಸಿಂಗಲ್ ಹೋಲ್ ಮಾಡಿ ಆಪರೇಟ್ ಮಾಡಿದ್ದಾರೆ. ಮಹಿಳೆ ತುಂಬಾ ನೋವಿನಿಂದ ನರಳಾಡುತ್ತಿದ್ದಳು. ನಮ್ಮ ಆಸ್ಪತ್ರೆಗೆ ಬಂದ ನಂತರ ಚೆಕ್ ಮಾಡಿ ಆಪರೇಟ್ ಮಾಡಿದೆ. ಎಂದು ಚಿಟಗುಪ್ಪಿ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ. ಶ್ರೀಧರ್ ದಂಡೆಪ್ಪನವರ ಹೇಳಿದರು.
ಇನ್ನು ಹುಬ್ಬಳ್ಳಿಯ ಚಿಟಗುಪ್ಪಿ ಆಸ್ಪತ್ರೆಗೆ ಪ್ರತಿದಿನ ನೂರಾರು ಜನ ಹೊರ ರೋಗಿಗಳು ಬರುತ್ತಾರೆ. ಇಲ್ಲಿ ಎಲ್ಲ ರೀತಿಯ ವೈದ್ಯರು ಇದ್ದಾರೆ. ಡಾ. ಶ್ರೀಧರ ದಂಡೆಪ್ಪನವರ ನೇತೃತ್ವದಲ್ಲಿ ಇಲ್ಲಿಯವರೆಗೆ ನೂರಾರು ಕ್ಲಿಷ್ಟಕರ ಶಸ್ತ್ರಚಿಕಿತ್ಸೆ ಮಾಡಿ ಜೀವ ಉಳಿಸಿದ್ದಾರೆ. ಎಲ್ಲ ವೈದ್ಯರು, ಸ್ಟಾಫ್ ನರ್ಸ್ ಕೂಡ ಇವರಿಗೆ ಸಾಥ್ ನೀಡಿದ್ದಾರೆ.
ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
27/05/2026 10:54 am