ಕುಂದಗೋಳ : ಪ್ರಸ್ತುತ 2027ರ ಶೈಕ್ಷಣಿಕ ವರ್ಷಕ್ಕೆ ಸಮಾಜ ಕಲ್ಯಾಣ ಇಲಾಖೆ ಡಾ.ಬಿ.ಆರ್.ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದ ಕಾಮಗಾರಿ ಮುಗಿಯುವ ಸೂಚನೆ ದೂರವಾಗಿದೆ.
ಹೌದು ! ಕುಂದಗೋಳ ಪಟ್ಟಣದ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಹಾಸ್ಟೆಲ್ ನಿರ್ವಹಣೆ ಕಾಮಗಾರಿಯನ್ನು ಅಂದಾಜು 36 ಲಕ್ಷ ಕ್ರಿಯಾ ಯೋಜನೆ ತಯಾರಿಸಿ 2025ರಲ್ಲೇ ಕೆ.ಆರ್.ಐ.ಡಿ.ಎಲ್ ಇಲಾಖೆಗೆ ಕಾಮಗಾರಿ ನೀಡಲಾಗಿತ್ತು.
ಕಾಮಗಾರಿ ನಿರ್ವಹಣೆ ನಡೆದ ಕೆ.ಆರ್.ಐ.ಡಿ.ಎಲ್ ಇಲಾಖೆ ತನಗೆ ಸಮಾಜ ಕಲ್ಯಾಣ ಇಲಾಖೆ ನೀಡಿದ 15 ಲಕ್ಷದ ಕಾಮಗಾರಿ ನಿರ್ವಹಿಸಿ ಉಳಿದ ಕಾಮಗಾರಿಗಳನ್ನು ಸಮಾಜ ಕಲ್ಯಾಣ ಇಲಾಖೆ ಹಣ ನೀಡದೆ ಇರುವ ಕಾರಣ ತಟಸ್ಥ ಮಾಡಿದೆ.
ಸದ್ಯ ಹಾಸ್ಟೆಲ್ ಕಟ್ಟಡದ ಎಲೆಕ್ಟ್ರಿಕಲ್ ಕೆಲಸ, ಬಣ್ಣ, ನೀರಿನ ವ್ಯವಸ್ಥೆ, ಕಿಚನ್ ಕೆಲಸ, ನೆಲಹಾಸು, ಕಸ ಕಡ್ಡಿ , ಹುಲ್ಲು ನಿರ್ವಹಣೆ ಸೇರಿದಂತೆ ಗೇಟ್ ಕಾಂಪೌಂಡ್ ಸೇರಿ ಬಹುತೇಕ 21 ಲಕ್ಷದ ಕಾಮಗಾರಿಗಳು ಬಾಕಿ ಉಳಿದಿವೆ.
ಈ ಪರಿಣಾಮ 2027ರಲ್ಲಿ ಸಮಾಜ ಕಲ್ಯಾಣ ಇಲಾಖೆ ಮೆಟ್ರಿಕ್ ಪೂರ್ವ ಬಾಲಕರ ಹಾಸ್ಟೆಲ್ ಸೇರುವ ವಿದ್ಯಾರ್ಥಿಗಳು ಪುನಃ ಅದೇ ಸಮಾಜ ಕಲ್ಯಾಣ ಇಲಾಖೆ ಹಳೆಯ ಇಕ್ಕಟ್ಟಾದ ಕಟ್ಟಡದಲ್ಲೇ ಇರಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದ್ದು ಸ್ವಂತ ಕಟ್ಟಡದ ವಾಸ ಯಾವಾಗ ? ಎಂಬುದು ಪ್ರಶ್ನೆಯಾಗಿದೆ.
ಶ್ರೀಧರ ಪೂಜಾರ, ಪಬ್ಲಿಕ್ ನೆಕ್ಸ್ಟ್ ಕುಂದಗೋಳ
Kshetra Samachara
28/05/2026 03:54 pm
LOADING...