ಕುಂದಗೋಳ : ಮುಂಗಾರು ಬಿತ್ತನೆಗೆ ಬೀಜ ರೈತಾಪಿ ಜನರಿಗೆ ಬೀಜ ಪೂರೈಕೆ ಮಾಡುತ್ತಿರುವ ಕುಂದಗೋಳ ರೈತ ಸಂಪರ್ಕ ಕೇಂದ್ರಕ್ಕೆ ತಹಶೀಲ್ದಾರ್ ರಾಜು ಮಾವರಕರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇಂದು ಬೆಳಿಗ್ಗೆ ತಹಶೀಲ್ದಾರ್ ರಾಜು ಮಾವರಕರ ಸಹಾಯಕ ಕೃಷಿ ನಿರ್ದೇಶಕರಾದ ರೇಖಾ ಗಡ್ಡದವರ ಉಪಸ್ಥಿತಿಯಲ್ಲಿ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಬೀಜಗಳ ಲಭ್ಯತೆ, ದಾಸ್ತಾನು ಮತ್ತು ವಿತರಣೆ ಬಗ್ಗೆ ಪರಿಶೀಲನೆ ನಡೆಸಿದರು. ಇದಲ್ಲದೆ ರೈತಾಪಿ ಜನರಿಗೆ ಬೀಜ ಸಮರ್ಪಕವಾಗಿ ಪೂರೈಕೆ ನಡೆದಿದೆಯಾ ? ಎಂಬುದರ ಮಾಹಿತಿಯನ್ನು ಸಹಾಯಕ ಕೃಷಿ ನಿರ್ದೇಶಕರಿಂದ ಪಡೆದುಕೊಂಡರು.
ಈ ವೇಳೆ ಕೃಷಿ ಅಧಿಕಾರಿ ಶಿವಕುಮಾರ್ ಬೀರಣ್ಣನವರ ಹಾಗೂ ಕೃಷಿ ಸಿಬ್ಬಂದಿಗಳ ಕಾರ್ಯವೈಖರಿ ಗಮನಿಸಿ ರೈತರಿಗೆ ಸಹಕಾರ ನೀಡುವಂತೆ ಸೂಚನೆ ನೀಡಿದರು.
ಶ್ರೀಧರ ಪೂಜಾರ, ಪಬ್ಲಿಕ್ ನೆಕ್ಸ್ಟ್ ಕುಂದಗೋಳ
Kshetra Samachara
27/05/2026 05:57 pm
LOADING...