ಕುಂದಗೋಳ : ತುರ್ತು ಆರೋಗ್ಯ ಸಮಸ್ಯೆ, ಅಪಘಾತದ ಸಂದರ್ಭಗಳಲ್ಲಿ ಜೀವ ರಕ್ಷಾ ಕವಚವಾಗಿ ಸೇವೆ ನೀಡಬೇಕಾದ ಆಂಬ್ಯುಲೆನ್ಸ್ ಉಪಯೋಗಕ್ಕೆ ಇಲ್ಲದಂತಾಗಿವೆ.
ಹೌದು ! ಹಾಲಿ ಶಾಸಕ ಎಂ.ಆರ್.ಪಾಟೀಲ್ ಮತಕ್ಷೇತ್ರ ಕುಂದಗೋಳ ತಾಲೂಕು ಆಸ್ಪತ್ರೆಯ ಆಂಬ್ಯುಲೆನ್ಸ್ ವಾಹನದಲ್ಲಿ ವೈದ್ಯಕೀಯ ಪರಿಕರ, ಸಿಬ್ಬಂದಿ, 2 ಜನ ಪೈಲೆಟ್'ಗಳ ಕೊರತೆ ಇದೆ.
ಮುಖ್ಯವಾಗಿ 56 ಹಳ್ಳಿಗಳಿಗೆ ತುರ್ತು ಸೇವೆ ನೀಡಬೇಕಾದ ಸಕಲ ವೈದ್ಯಕೀಯ ಪರಿಕರ ಹೊಂದಿದ ಆರೋಗ್ಯ ಕವಚ 108 ಆಂಬ್ಯುಲೆನ್ಸ್ ವಾಹನವನ್ನು ತಾಲೂಕು ಆಸ್ಪತ್ರೆಗೆ ಬಳಸಿಕೊಳ್ಳುತ್ತಿರುವ ಕಾರಣ ಹಳ್ಳಿಯ ಜನರಿಗೆ ಆಂಬ್ಯುಲೆನ್ಸ್ ಸೇವೆ ಸೂಕ್ತ ಸಮಯಕ್ಕೆ ಸಿಗುತ್ತಿಲ್ಲ.
ಇದಲ್ಲದೆ 6 ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ಆಂಬ್ಯುಲೆನ್ಸ್ ಸೇವೆ ಸಮರ್ಪಕವಾಗಿ ಇಲ್ಲದೆ ಇರುವುದು ಅದೆಷ್ಟೋ ಸಾವು ನೋವಿಗೆ ಕಾರಣವಾಗಿದೆ.
ಇವುಗಳಲ್ಲಿ ಗುಡಗೇರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆಂಬ್ಯುಲೆನ್ಸ್ ವೈದ್ಯಕೀಯ ಪರಿಕರ ಮತ್ತು ಸಿಬ್ಬಂದಿಯನ್ನೇ ಹೊಂದಿಲ್ಲ,
ಯರಗುಪ್ಪಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕೊಡುಗೆಯಾಗಿ ಬಂದ ಆಂಬ್ಯುಲೆನ್ಸ್ ಇದ್ದರೂ ಚಾಲಕ ಹುದ್ದೆ ಸೃಷ್ಟಿಯಾಗಿಲ್ಲ, ವಾಹನ ಸಹ ಕೆಟ್ಟು ನಿಂತಿದೆ.
ಒಟ್ಟಾರೆ ಹಳ್ಳಿಗಳಿಗೆ ಕರೆ ಬಂದರೆ ತುರ್ತು ಸೇವೆ ನೀಡಬೇಕಾದ ಆಂಬ್ಯುಲೆನ್ಸ್ ವಾಹನಗಳ ಅವ್ಯವಸ್ಥೆ ಜನರ ಜೀವಕ್ಕೆ ಸಂಚಕಾರ ತಂದಿದೆ.
ಶ್ರೀಧರ ಪೂಜಾರ, ಪಬ್ಲಿಕ್ ನೆಕ್ಸ್ಟ್ ಕುಂದಗೋಳ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
03/06/2026 10:47 pm
LOADING...