ಹುಬ್ಬಳ್ಳಿ: ಸಾರ್ವಜನಿಕರು ಅನಾರೋಗ್ಯಕ್ಕೆ ಚಿಕಿತ್ಸೆ ಪಡೆಯಲು ಆರೋಗ್ಯ ಕೇಂದ್ರಗಳಿಗೆ ಹೋಗುತ್ತಾರೆ. ಅದರಲ್ಲೂ ಸರ್ಕಾರಿ ಆಸ್ಪತ್ರೆಗಳು ಸಾರ್ವಜನಿಕರ ಪಾಲಿಗೆ ಸಂಜೀವಿನಿ ಆಗಬೇಕು. ಆದರೆ ಇಲ್ಲಿ ಆಸ್ಪತ್ರೆಯಲ್ಲಿ ವೈದ್ಯರೇ ಇರುವುದಿಲ್ಲವಂತೆ..
ಹೌದು.. ಹಳೇ ಹುಬ್ಬಳ್ಳಿಯ ನಗರ ಆರೋಗ್ಯ ಕೇಂದ್ರಕ್ಕೆ ಅಲೆದಾಡಿದ ಸಾರ್ವಜನಿಕರೊಬ್ಬರು ಇಲ್ಲಿನ ವೈದ್ಯರು ಇಲ್ಲದೇ ಇರುವುದನ್ನು ವಿಡಿಯೋ ಮಾಡಿ ಪಬ್ಲಿಕ್ ನೆಕ್ಸ್ಟ್ ಮಾಧ್ಯಮಕ್ಕೆ ನೀಡಿದ್ದಾರೆ. ಸುಮಾರು ಮೂರು ಬಾರಿ ಭೇಟಿ ನೀಡಿದರೂ, ವೈದ್ಯರು ಇಲ್ಲದೇ ಇರುವುದರಿಂದ ಸಾರ್ವಜನಿಕರು ಆಕ್ರೋಶಗೊಂಡಿದ್ದಾರೆ. ಜನರ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಿದ್ದ ವೈದ್ಯರೇ ಕರ್ತವ್ಯಕ್ಕೆ ಹಾಜರಾಗದೇ ಇದ್ದರೆ ಸಾರ್ವಜನಿಕರ ಕಷ್ಟವನ್ನು ಆಲಿಸುವವರು ಯಾರು..?
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
03/06/2026 08:57 pm
LOADING...