ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ರಾಮಾಪುರ ಗ್ರಾಮದಲ್ಲಿ ಪಂಚಾಯಿತಿ ಜಾಗದಲ್ಲಿ ಅನಧಿಕೃತ ಮೂರ್ತಿ ಸ್ಥಾಪನೆ - ತೆರವುಗೊಳಿಸಿದ ಅಧಿಕಾರಿಗಳು

ಹುಬ್ಬಳ್ಳಿ: ಹುಬ್ಬಳ್ಳಿ ತಾಲ್ಲೂಕಿನ ರಾಮಾಪುರ ಗ್ರಾಮದಲ್ಲಿ ಪಂಚಾಯಿತಿ ಜಾಗದಲ್ಲಿ ಕೆಲವೊಂದಿಷ್ಟು ಕಿಡಿಗೇಡಿಗಳು ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದು, ಇದನ್ನು ಕಂಡ ತಾಲ್ಲೂಕು ಪಂಚಾಯಿತಿ, ತಹಶೀಲ್ದಾರರ ನಿರ್ದೇಶನದಲ್ಲಿ ಮೂರ್ತಿ ತೆರವುಗೊಳಿಸಿದರು.

ಹುಬ್ಬಳ್ಳಿ ತಾಲ್ಲೂಕಿನ ಚನ್ನಾಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ರಾಮಾಪುರ ಗ್ರಾಮದಲ್ಲಿನ ಸರ್ಕಾರಿ ಬಾವಿ ಜಾಗದಲ್ಲಿ ಅನಧಿಕೃತವಾಗಿ ಇಟ್ಟಿರುವ ಮೂರ್ತಿಯನ್ನು,‌ ಎಲ್ಲ ಅಧಿಕಾರಿಗಳ ಸಮ್ಮುಖದಲ್ಲಿ ತೆರವುಗೊಳಿಸಿದರು. ಸದರಿ ಸರ್ಕಾರಿ ಬಾವಿ ಜಾಗವು ಸಾರ್ವಜನಿಕ ಆಸ್ತಿಯಾಗಿದ್ದು, ನರೇಗಾ ಯೋಜನೆ ಅಡಿಯಲ್ಲಿ ಪುರಾತನ ಬಾವಿಯನ್ನು ಅಭಿವೃದ್ಧಿ ಮಾಡಲಾಗಿದ್ದು. ಕೆಲ ವ್ಯಕ್ತಿಗಳು ಆ ಜಾಗವನ್ನು ಅತಿಕ್ರಮಣ ಮಾಡಿಕೊಳ್ಳುವ ಉದ್ದೇಶದಿಂದ ಪದೇ ಪದೇ ಅದೇ ಸ್ಥಳದಲ್ಲಿ ಅನಧಿಕೃತವಾಗಿ ಮೂರ್ತಿಯನ್ನು ಸ್ಥಾಪಿಸುತ್ತಿದ್ದಾರೆ. ಈವರೆಗೆ ಇದೇ ಸ್ಥಳದಲ್ಲಿ ಮೂರ್ತಿ ಸ್ಥಾಪಿಸಿರುವುದು ನಾಲ್ಕನೇ (4ನೇ) ಬಾರಿಯಾಗಿದೆ. ಇಂದು ಅದೇ ಮೂರ್ತಿಯನ್ನು ಅಧಿಕಾರಿಗಳು ತೆರವುಗೊಳಿಸಿದ್ದಾರೆ.

ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕರಾದ ಸದಾನಂದ ಅಮರಾಪುರ, ಇಮ್ರಾನ್ ಪಠಾಣ, ಗ್ರಾಮೀಣ ಪೊಲೀಸ್ ಪಿಎಸ್‌ಐ ಜಿ.ಎಫ್ ದೊಡ್ಡವಾಡ, ಕಂದಾಯ ನಿರೀಕ್ಷಕರು, ಕಂದಾಯ ಇಲಾಖೆ ಹುಬ್ಬಳ್ಳಿ, ಪ್ರಭುಲಿಂಗ ಆರ್ ಗಡ್ಡದ, ಆಡಳಿತಾಧಿಕಾರಿಗಳು, ಗ್ರಾಮ ಪಂಚಾಯತ್ ಚನ್ನಾಪುರ ಇದ್ದರು.

Edited By : Vinayak Patil
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

02/06/2026 03:27 pm

Cinque Terre

21.03 K

Cinque Terre

0

ಸಂಬಂಧಿತ ಸುದ್ದಿ