ಧಾರವಾಡ: ಧಾರವಾಡ ಜಿಲ್ಲಾಧಿಕಾರಿ ಕಚೇರಿಯ ಕಟ್ಟಡದ ಮೇಲೆ ಹರಿದ ಸ್ಥಿತಿಯಲ್ಲಿದ್ದ ರಾಷ್ಟ್ರಧ್ವಜವನ್ನು ಹಾರಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಇಡೀ ದೇಶಕ್ಕೇ ಅಧಿಕೃತವಾಗಿ ರಾಷ್ಟ್ರಧ್ವಜವನ್ನು ತಯಾರಿಸಿಕೊಡುವ ಜಿಲ್ಲೆಯಾದ ಧಾರವಾಡದ, ಜಿಲ್ಲಾಡಳಿತದ ಕೇಂದ್ರ ಕಚೇರಿಯಲ್ಲೇ ಇಂತಹ ಬೇಜವಾಬ್ದಾರಿತನ ನಡೆದಿರುವುದು ಸಾರ್ವಜನಿಕರು ಹಾಗೂ ದೇಶಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿದೆ.
ಭಾರತೀಯ ಧ್ವಜ ಸಂಹಿತೆಯ ಪ್ರಕಾರ ಹರಿದ, ಬಣ್ಣಗೆಟ್ಟ ಅಥವಾ ಹಾನಿಗೊಳಗಾದ ರಾಷ್ಟ್ರಧ್ವಜವನ್ನು ಹಾರಿಸುವುದು ಶಿಕ್ಷಾರ್ಹ ಅಪರಾಧವಾಗಿದೆ. ಈಗ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಮೇಲೆ ಈ ರೀತಿಯ ಧ್ವಜ ಹಾರಾಟ ಜಿಲ್ಲಾಡಳಿತ ಆಡಳಿತದ ವ್ಯವಸ್ಥೆಯನ್ನು ಪ್ರಶ್ನಿಸುತ್ತಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
02/06/2026 10:12 pm
LOADING...