ನವಲಗುಂದ: ರೈತ ಪರ ಹೋರಾಟಗಾರ ಕಳಸಾ ಬಂಡೂರಿ ಹೋರಾಟದ ಮುಂಚುಣಿ ನಾಯಕ, ಚಕ್ಕಡಿ ದಾರಿ ಹರಿಕಾರ, ಬಂಡಾಯದ ನಾಡಿನ ಜನಪ್ರೀಯ ಶಾಸಕ ಎನ್.ಎಚ್.ಕೋನರಡ್ಡಿ ಅವರಿಗೆ ಡಿ.ಕೆ. ಶಿವಕುಮಾರ ಅವರ ಮಂತ್ರಿ ಮಂಡಲದ ಸಂಪುಟದಲ್ಲಿ ಕೃಷಿ ಸಚಿವ ಸ್ಥಾನ ನೀಡಬೇಕೆಂದು ತಾಲೂಕಾ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ವರ್ಧಮಾನಗೌಡ ಹಿರೇಗೌಡರ ಒತ್ತಾಯಿಸಿದರು.
ಪಟ್ಟಣದ ಅಣ್ಣಿಗೇರಿ ರಸ್ತೆಯಲ್ಲಿರುವ ಪ್ರವಾಸಿ ಮಂದಿರದಲ್ಲಿ ಕಾಂಗ್ರೆಸ್ ಮುಖಂಡರ ಹಾಗೂ ಎನ್.ಎಚ್.ಕೋನರಡ್ಡಿ ಅಭಿಮಾನಿ ಬಳಗದ ಸಭೆಯಲ್ಲಿ ಒಮ್ಮತದ ಒತ್ತಾಯ ಮಾಡಿ ಮಾತನಾಡಿದ ಅವರು ನಮ್ಮ ಶಾಸಕರು ಕ್ಷೇತ್ರದಲ್ಲಿಯೇ ನೂರಾರು ಕಿಲೋ ಮೀಟರ ಚಕ್ಕಡಿ ರಸ್ತೆಗಳನ್ನು ಮಾಡಿ ರೈತರಿಗೆ ಅನುಕೂಲತೆಗಳನ್ನು ಮಾಡಿದ್ದಾರೆ. ಇನ್ನು ರೈತರ ಪರವಾಗಿ ಕಳಸಾ ಬಂಡೂರಿ ಹೋರಾಟದಲ್ಲಿ ತೊಡಗಿಸಿಕೊಂಡು ಜನರ ಮೆಚ್ಚುಗೆ ಪಡೆದು ಈಗ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿ ಜನಸೇವೆ ಮಾಡುತ್ತಿದ್ದಾರೆ. ಅವರಿಗೆ ಮಂತ್ರಿ ಮಂಡಲದಲ್ಲಿ ಕೃಷಿ ಮಂತ್ರಿ ಸ್ಥಾನ ನೀಡಬೇಕೆಂದು ಕಾಂಗ್ರೆಸ್ ಹೈ-ಕಮಾಂಡ್ ಮುಖಂಡರಿಗೆ ಒತ್ತಾಯಿಸಿದರು.
ನಂತರ ಮಾತನಾಡಿದ ಮಲಪ್ರಭಾ ನೀರು ಬಳಕೆದಾರರ ಮಹಾಮಂಡಳ ಅಧ್ಯಕ್ಷ ಸದುಗೌಡ ಪಾಟೀಲ ಅವರು ಹೋರಾಟದಲ್ಲಿ ಮುಂಚುಣಿ ನಾಯಕ, ರೈತರ ಬಗ್ಗೆ ಅಪಾರ ಕಾಳಜಿ, ಜನರ ಕಷ್ಟಗಳಿಗೆ ಸ್ಪಂದಿಸುವ ನಾಯಕನಿಗೆ ಮಂತ್ರಿ ಮಂಡಲದ ಸಂಪುಟದಲ್ಲಿ ಕೃಷಿ ಸಚಿವ ಸ್ಥಾನ ನೀಡಿದರೆ ರೈತರ ಪರವಾಗಿ ಇನ್ನು ಹೆಚ್ಚು ಅಭಿವೃದ್ದಿ ಕೆಲಸಗಳನ್ನು ಕೈಗೊಳ್ಳಲು ಅನುಕೂಲವಾಗುತ್ತದೆ ಎಂದು ಆಗ್ರಹಿಸಿದರು.
ಈ ವೇಳೆ ಆರ್.ಎಚ್.ಕೋನರಡ್ಡಿ, ರಾಜಣ್ಣ ಹಳ್ಯಾಳ, ಶಿವಾನಂದ ಭೂಮಣ್ಣವರ, ದಾವಲಸಾಬ ಖುದ್ದಣ್ಣವರ, ಆನಂದ ಹವಳಕೋಡ, ಸಿರಾಜುದ್ದೀನ್ ಧಾರವಾಡ, ಮದರಸಾಬ ಉಗರಗೋಳ್ಳ, ಮೋದಿನಸಾಬ ಶಿರೂರ, ಸುರೇಶ ಮೇಟಿ, ಜೀವನ ಪವಾರ, ದೇವೇಂದ್ರಪ್ಪ ಹಳ್ಳದ, ಪ್ರಕಾಶ ಶಿಗ್ಲಿ ಸೇರಿದಂತೆ ಅನೇಕ ಮುಖಂಡರು ಭಾಗಿಯಾಗಿದ್ದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
01/06/2026 09:30 pm
LOADING...