ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯಾರಿಗೆ ಒಲಿಯುತ್ತೆ ಧಾರವಾಡ ಜಿಲ್ಲೆ ಮಂತ್ರಿಗಿರಿ : ನಾಲ್ಕು ಜನ ಪೈಪೋಟಿಯಲ್ಲಿ ಧಾರವಾಡ ಪೇಡಾ ಯಾರಿಗೆ...?!

ಹುಬ್ಬಳ್ಳಿ: ರಾಜ್ಯ ರಾಜಕೀಯದಲ್ಲಿ ನಾಯಕತ್ವ ಬದಲಾವಣೆಯಾಗಿದೆ. ಮುಂದಿನ ಮುಖ್ಯಮಂತ್ರಿಯಾಗಿ ಡಿ‌. ಕೆ. ಶಿವಕುಮಾರ್ ಅವರು ನಾಳೆ ಬುಧವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಆದರೆ, ಧಾರವಾಡ ಜಿಲ್ಲೆಯಿಂದ ಮಂತ್ರಿಗಿರಿ ಯಾರಿಗೆ ಸಿಗುತ್ತದೆ ಎಂಬ ಚರ್ಚೆ ಜೋರಾಗಿ ನಡೆಯುತ್ತಿದೆ.

ನಾಲ್ಕು ಜನ ನಾಯಕರಲ್ಲಿ ಯಾರಿಗೆ ಒಲಿಯುತ್ತೆ ಧಾರವಾಡ ಜಿಲ್ಲೆ ಪಟ್ಟಾಭಿಷೇಕ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡುತ್ತಿದೆ. ಹೌದು,,, ಹುಬ್ಬಳ್ಳಿ ಧಾರವಾಡದಲ್ಲಿ ತಮ್ಮ ತಮ್ಮ ನಾಯಕರಿಗೆ ಈ ಸಲ ಸಚಿವಗಿರಿ ಕೊಡಲೇಬೇಕೆಂಬ ಒತ್ತಡವೂ ಕಾರ್ಯಕರ್ತರ ಬಳಗದಿಂದ ಕೇಳಿ ಬರುತ್ತಿದೆ.

ಈ ನೂತನ ಮುಖ್ಯಮಂತ್ರಿ ಆಡಳಿತದಲ್ಲಿ ಸಚಿವ ಸ್ಥಾನಕ್ಕೆ ಆಕಾಂಕ್ಷಿಗಳ ಪೈಪೋಟಿ ಜೋರಾಗಿ ನಡೆಯುತ್ತಿದೆ. ಅದರಲ್ಲೂ ಹೊಸಬರಿಗೆ ಸಚಿವ ಸ್ಥಾನ ಹೆಚ್ಚಿನ ಪ್ರಮಾಣದಲ್ಲಿ ಕೊಡಬೇಕು ಎಂಬ ಬೇಡಿಕೆಯ ಕೂಗು ಹೈಕಮಾಂಡ್‌ವರೆಗೂ ತಲುಪಿದ್ದು, ಹೊಸಬರಲ್ಲಿ ಆಶಾಭಾವನೆ ಮೂಡಿದೆ.

ಸದ್ಯ ಸಚಿವ ಸ್ಥಾನಕ್ಕೆ ರೇಸ್‌ನಲ್ಲಿ ಇರುವವರು ಎಂದರೆ ಒಬ್ಬರು ವಿನಯ ಕುಲಕರ್ಣಿ ಸದ್ಯ ಕೊಲೆ ಆರೋಪದಲ್ಲಿ ಜೈಲು ಸೇರಿರುವುದರಿಂದ ಅನರ್ಹರಾಗಿದ್ದಾರೆ. ಇನ್ನುಳಿದಂತೆ ಈಗಾಗಲೇ ಸಚಿವರಾಗಿರುವ ಸಂತೋಷ್ ಲಾಡ್, ಮೂರು ಬಾರಿ ಶಾಸಕರಾಗಿ ಸದ್ಯ ಸ್ಲಂ ಬೋರ್ಡ್ ಅಧ್ಯಕ್ಷರಾಗಿರುವ ಪ್ರಸಾದ ಅಬ್ಬಯ್ಯ, ಮಹದಾಯಿ ಹೋರಾಟದಿಂದ ಬಂದಿರುವ ಎನ್. ಹೆಚ್. ಕೋನರೆಡ್ಡಿ ಶಾಸಕರಾಗಿದ್ದಾರೆ. ಈ ಮೂವರಲ್ಲಿ ಯಾರಿಗೆ ಸಚಿವ ಸ್ಥಾನ ಸಿಗುತ್ತದೆ ಎಂಬ ಚರ್ಚೆ ನಡೆಯುತ್ತಿದೆ. ಇದರ ನಡುವೆ MLC ಸಲೀಂ ಅಹಮದ್ ಅವರು ಕೂಡ ಧಾರವಾಡ ಜಿಲ್ಲೆಯಲ್ಲಿ ಸಚಿವರಾಗಲು ಶತ ಪ್ರಯತ್ನ ಮಾಡುತ್ತಿದ್ದಾರೆ.

ಇವರಲ್ಲಿ ಯಾರಿಗೆ ಸಚಿವ ಸ್ಥಾನ ಸಿಗುತ್ತದೆ ಎಂಬ ಚರ್ಚೆ ಜೋರಾಗಿ ನಡೆಯುತ್ತಿದೆ. ಇನ್ನು ಸಂತೋಷ್ ಲಾಡ್ 2 ಬಾರಿ ಸಚಿವರಾಗಿ ಅನುಭವ ಹೊಂದಿದ್ದು, ಇವರನ್ನು ಮುಂದುವರಿಸುತ್ತಾರೆ ಎಂಬ ಮಾತು ಕೇಳಿ ಬರುತ್ತಿದೆ. ಹ್ಯಾಟ್ರಿಕ್ ಗೆಲುವು ಸಾಧಿಸಿರುವ ಪ್ರಸಾದ ಅಬ್ಬಯ್ಯ ಅವರು ಹಿಂದೆ ಲಿಡ್ಕರ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದವರು.

ಇವರಿಗೆ ಈ ಸಲ ಸಚಿವಗಿರಿ ಕೊಡಲೇಬೇಕು ಎಂಬ ಒತ್ತಾಯ ಅವರ ಬೆಂಬಲಿಗರದ್ದು. ಇನ್ನು ಜೆಡಿ‌ಎಸ್ ನಿಂದ ಬಂದಿರುವ ಕೋನರೆಡ್ಡಿ, ರೈತ, ಮಹದಾಯಿ ಹೋರಾಟದಲ್ಲಿ ತೊಡಗಿಸಿಕೊಂಡಿದ್ದು, ಇವರಿಗೆ ಸಚಿವ ಸ್ಥಾನ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿ ಅವರ ಅಭಿಮಾನಿಗಳಿದ್ದಾರೆ.

ಸತತವಾಗಿ ಹ್ಯಾಟ್ರಿಕ್ ಗೆಲುವು ಸಾಧಿಸಿದ ಪ್ರಸಾದ್ ಅಬ್ಬಯ್ಯ ಅವರ ಹೆಸರು ಮುಂಚೂಣಿಯಲ್ಲಿದೆ ಎಂಬುದು ಮೂಲ ಮಾಹಿತಿಯಿಂದ ತಿಳಿದು ಬಂದಿದೆ. ಆದರೆ ಯಾರಿಗೆ ಒಲಿದು ಬರುತ್ತೆ ಧಾರವಾಡ ಜಿಲ್ಲೆ ಮಂತ್ರಿಗಿರಿ ಎಂಬುದು ಪ್ರಶ್ನೆಯಾಗಿದೆ..?

ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ.

Edited By : Manjunath H D
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

02/06/2026 04:05 pm

Cinque Terre

12.79 K

Cinque Terre

7

ಸಂಬಂಧಿತ ಸುದ್ದಿ