ಧಾರವಾಡ : ಸರ್ಕಾರಿ ಇಲಾಖೆ "ಕಾರ್ಯಾಲಯದ ಆದೇಶ" ಪ್ರತಿಯೊಂದು ಕಳೆದ ಹಲವಾರು ದಿನಗಳಿಂದ ವಾಟ್ಸಾಪ್ ಗ್ರೂಪ್'ಗಳಲ್ಲಿ ವೈರಲ್ ಆಗಿ ಕೊನೆಗೆ ಮೌನವಾಗಿದ್ದು, ಸರ್ಕಾರಿ ಕಚೇರಿಗಳ ದಾಖಲೆ ಭದ್ರತೆ ಹೀಗೆನಾ? ಎಂಬ ಪ್ರಶ್ನೆ ಉಂಟು ಮಾಡಿದೆ.
ಹೌದು ! ಧಾರವಾಡ ಜಿಲ್ಲಾ ಪಂಚಾಯತ್ ಕಾರ್ಯಾಲಯವು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಧಿಸೂಚನೆ ಮೇರೆಗೆ ಹೊರಡಿಸಲಾದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳ ಸಹಿ ಹೊಂದಿರುವ ಯಾವುದೇ ದಿನಾಂಕ ಇರದ ವರ್ಗಾವಣೆ ಪತ್ರ ವೈರಲ್ ಆಗಿದೆ.
ಕುಂದಗೋಳ ತಾಲ್ಲೂಕು ಜಿಲ್ಲಾ ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗದ ಸಹಾಯಕ ಇಂಜಿನಿಯರ್ ವಿಜಯಕುಮಾರ್ ಹಿಂದಿನಮನಿ ಅವರನ್ನೂ ಶಿರಾ ಸಹಾಯಕ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗಕ್ಕೆ ವರ್ಗಾಯಿಸಿದ ಕಾರ್ಯಾಲಯದ ಆದೇಶ ಇದಾಗಿದೆ.
ಕುಂದಗೋಳ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಸಹಾಯಕ ಇಂಜಿನಿಯರ್ ಹುದ್ದೆಗೆ ಅಫಜಲಪುರದ ವಿಜಯ ಮಹಾಂತೇಶ ಪೂಜಾರಿ ಇವರನ್ನು ಕುಂದಗೋಳಕ್ಕೆ ನೇಮಕವನ್ನು ಈ ವೈರಲ್ ಆದೇಶ ಪ್ರತಿ ಹೊಂದಿದೆ.
ಒಟ್ಟಾರೆ ಏಪ್ರಿಲ್. 2026 ರ ಈ ಪತ್ರ ಜಿಲ್ಲಾ ಪಂಚಾಯತ್ ಕಚೇರಿಯಿಂದಲೇ ದಿನಾಂಕ ಇರದೇ ವೈರಲ್ ಆಗಿದ್ದರೂ ಇದರಲ್ಲಿನ ಯಾವುದೇ ವಿಷಯ ಕಾರ್ಯರೂಪಕ್ಕೆ ಬಂದಿಲ್ಲ.
ಶ್ರೀಧರ ಪೂಜಾರ, ಪಬ್ಲಿಕ್ ನೆಕ್ಸ್ಟ್
Kshetra Samachara
02/06/2026 07:29 am
LOADING...