ಕುಂದಗೋಳ : ನಿತ್ಯ ಜನರಿಗೆ ಶುದ್ಧ ನೀರನ್ನು ಒದಗಿಸುತ್ತಿದ್ದ ಕುಂದಗೋಳ ಪಟ್ಟಣ ಪಂಚಾಯಿತಿ ವ್ಯಾಪ್ತಿಯ 2 ಶುದ್ಧ ಕುಡಿಯುವ ನೀರಿನ ಘಟಕಗಳು ಕಳೆದ 7 ದಿನಗಳಿಂದ ಬಂದ್ ಆಗಿವೆ.
ಹೌದು ! ಕುಂದಗೋಳ ಪಟ್ಟಣ ಪಂಚಾಯಿತಿ ವ್ಯಾಪ್ತಿಯ 8 ಶುದ್ಧ ಕುಡಿಯುವ ನೀರಿನ ಘಟಕಗಳ ಪೈಕಿ 6 ಶುದ್ಧ ಕುಡಿಯುವ ನೀರಿನ ಘಟಕಗಳು ಕಳೆದ ಹಲವು ದಿನಗಳಿಂದ ಬಳಕೆ ಇಲ್ಲದೆ ಇರುವ ಕಾರಣ ತಟಸ್ಥವಾಗಿವೆ.
ಅದರಲ್ಲಿ ಕೇವಲ 2 ಶುದ್ಧ ಕುಡಿಯುವ ನೀರಿನ ಘಟಕಗಳು ಮಾತ್ರ ನಿತ್ಯ ಜನರಿಗೆ ನೀರು ಪೂರೈಸುತ್ತಿದ್ದವು, ಆದರೆ, ಇತ್ತೀಚಿನ 7 ದಿನಗಳಲ್ಲಿ ತಾಂತ್ರಿಕ ಸಮಸ್ಯೆ ಕಾರಣ ಘಟಕಗಳು ಬಂದ್ ಆಗಿದ್ದು ಕುಂದಗೋಳ ಪಟ್ಟಣದ ಜನ ಮಾತ್ರವಲ್ಲ, ಕುಂದಗೋಳಕ್ಕೆ ಶುದ್ಧ ನೀರು ಅರಸಿ ಬರುವ ಹಳ್ಳಿಗರಿಗೂ ಸಮಸ್ಯೆಯಾಗಿದೆ.
ಈ ಬಗ್ಗೆ ಸಂಬಂಧಪಟ್ಟ ಕುಂದಗೋಳ ಪಟ್ಟಣ ಪಂಚಾಯಿತಿ ನೀರು ಸರಬರಾಜು ಸಹಾಯಕ ಮಂಜುನಾಥ ಶಿಕ್ಕಲಗಾರ ಅವರನ್ನೂ ಕೇಳಿದರೆ ಶೀಘ್ರವೇ ಘಟಕ ದುರಸ್ತಿ ಮಾಡಿಸುತ್ತೇವೆ ಎನ್ನುತ್ತಾರೆ, ಆದರೆ ಯಾವಾಗ ? ಗೊತ್ತಿಲ್ಲ !
ಒಟ್ಟಾರೆ ಬದಲಾಗುತ್ತಿರುವ ಹವಾಗುಣ ಹಾಗೂ ಸಾಂಕ್ರಾಮಿಕ ರೋಗದ ಭೀತಿ ನಡುವೆ ಇದೀಗ ಶುದ್ಧ ನೀರು ಸಿಗದೆ ಇರುವುದು ಜನರಿಗೆ ಸಮಸ್ಯೆಯಾಗಿದೆ.
ಶ್ರೀಧರ ಪೂಜಾರ, ಪಬ್ಲಿಕ್ ನೆಕ್ಸ್ಟ್
Kshetra Samachara
03/06/2026 09:02 am
LOADING...