ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ರಾತ್ರೋರಾತ್ರಿ ಸತತ 3ನೇ ಬಾರಿಗೆ ಪ್ರತಿಷ್ಠಾಪಿಸಿದ ವಿಠ್ಠಲ ಮೂರ್ತಿ ತೆರವು !

ಹುಬ್ಬಳ್ಳಿ : ರಾಮಾಪೂರ ಗ್ರಾಮದಲ್ಲಿ ಯಾವುದೇ ಅನುಮತಿ ಇಲ್ಲದೆ ರಾತ್ರೋರಾತ್ರಿ ಸತತ ಮೂರನೇ ಬಾರಿ ಪ್ರತಿಷ್ಠಾಪನೆ ಮಾಡಲಾಗಿದ್ದ ವಿಠ್ಠಲ ಮೂರ್ತಿಯನ್ನು ತಾಲುಕೂ ಪಂಚಾಯಿತಿ ಅಧಿಕಾರಿಗಳು ಸ್ಥಳೀಯ ಗ್ರಾಮ ಪಂಚಾಯಿತಿ ಸಹಕಾರದಲ್ಲಿ ತರೆವು ಮಾಡಿದ್ದಾರೆ.

ಹುಬ್ಬಳ್ಳಿ ತಾಲುಕೂ ಚನ್ನಾಪೂರ ಗ್ರಾಮ ಪಂಚಾಯತಿ ವ್ಯಾಪ್ತಿಯ ರಾಮಾಪೂರ ಗ್ರಾಮದ ಬಸ್ ನಿಲ್ದಾಣದ ಬಳಿ ನರೇಗಾ ಯೋಜನೆಯಡಿ ಪುನರುಜ್ಜೀವನಗೊಳಿಸಲಾದ ಬಾವಿಯ ಮುಂದೆ ಮಾರ್ಚ್.19 ರಂದು ಯಾರೋ ? ವಿಠ್ಠಲ ದೇವರ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದರು.

ಈ ಬಗ್ಗೆ ಸಂಬಂಧಪಟ್ಟ ಹುಬ್ಬಳ್ಳಿ ತಾಲುಕೂ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ಸೋಮವಾರ ಜೂನ್.1 ರಂದು ಅನುಮತಿ ಇಲ್ಲದೆ ಪ್ರತಿಷ್ಠಾಪನೆ ಮಾಡಿದ ವಿಠ್ಠಲ ಮೂರ್ತಿಯನ್ನು ತೆರವು ಮಾಡಿದ್ದಾರೆ.

ಸತತ ಮೂರು ಬಾರಿ ಒಂದೇ ಸ್ಥಳದಲ್ಲೇ ಪದೇ ಪದೇ ವಿಠ್ಠಲ ದೇವರ ಮೂರ್ತಿ ಪ್ರತಿಷ್ಠಾಪನೆ ನಡೆದಿದೆ ಎನ್ನಲಾಗಿದೆ, ಈ ಬಗ್ಗೆ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯ ಕೇಳಿ ಬಂದಿವೆ.

ಒಟ್ಟಾರೆ ಸೋಮವಾರ ರಾಮಾಪೂರ ಗ್ರಾಮದಲ್ಲಿ ನಡೆದ ಮೂರ್ತಿ ತೆರವು ಕಾರ್ಯಾಚರಣೆಯಲ್ಲಿ ನರೇಗಾ ಸಹಾಯಕ ನಿರ್ದೇಶಕರಾದ ಸದಾನಂದ ಅಮರಾಪೂರ, ಗ್ರಾಪಂ ಅಭಿವೃದ್ಧಿ ಅಧಿಕಾರಿ ಸುನಂದಾ ಕಮತಿ ಹಾಗೂ ಪೊಲೀಸ್ ಅಧಿಕಾರಿಗಳು ಬಿಗಿ ಬಂದೋಬಸ್ತ್ ಒದಗಿಸಿದ್ದರು.

-ಶ್ರೀಧರ ಪೂಜಾರ, ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ

Edited By : Shivu K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

02/06/2026 03:24 pm

Cinque Terre

8.86 K

Cinque Terre

0

ಸಂಬಂಧಿತ ಸುದ್ದಿ