ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

18 ವರ್ಷಗಳ ದಾಖಲೆಗೆ ಬ್ರೇಕ್ ಹಾಕಿದ ನೈಋತ್ಯ ರೈಲ್ವೆ : ಮೇ 2026ರಲ್ಲಿ 1481.46 ಕೋಟಿ ಆದಾಯ

ಹುಬ್ಬಳ್ಳಿ ಮೂಲದ ನೈಋತ್ಯ ರೈಲ್ವೆಯು ಮೇ 2026 ರಲ್ಲಿ ಸರಕು ಸಾಗಣೆ ಮತ್ತು ಪ್ರಯಾಣಿಕರ ಆದಾಯದಲ್ಲಿ ಹಿಂದಿನ ಎಲ್ಲ ದಾಖಲೆಗಳನ್ನು ಮುರಿದು, ಹೊಸ ಮೈಲಿಗಲ್ಲನ್ನು ಸ್ಥಾಪಿಸಿದೆ. ಕಳೆದ ಹಲವು ವರ್ಷಗಳಲ್ಲಿ ಕಾಣದಂತಹ ಅದ್ಭುತ ಬೆಳವಣಿಗೆಯನ್ನು ಈ ವಲಯವು ಸಾಧಿಸಿದೆ.

ಮೇ 2026 ರಲ್ಲಿ ನೈಋತ್ಯ ರೈಲ್ವೆಯು ಒಟ್ಟು 4.4 ಮಿಲಿಯನ್ ಟನ್ ಸರಕು ಸಾಗಣೆ ಮಾಡುವ ಮೂಲಕ, 2008 ರಲ್ಲಿ ಸ್ಥಾಪಿಸಿದ್ದ ಹಿಂದಿನ ದಾಖಲೆಯನ್ನು ಮೀರಿ ನಿಂತಿದೆ. ಇದು ವಲಯದ ಇತಿಹಾಸದಲ್ಲಿಯೇ ಅತ್ಯಧಿಕ ಸರಕು ಸಾಗಣೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ, ಕಲ್ಲಿದ್ದಲು ಸಾಗಣೆಯಲ್ಲಿ ಶೇ. 23.3, ಕಂಟೇನರ್ ಸಾಗಣೆಯಲ್ಲಿ ಶೇ. 16.9 ಹಾಗೂ ಇತರೆ ಸರಕುಗಳ ಲೋಡಿಂಗ್‌ನಲ್ಲಿ ಬರೋಬ್ಬರಿ ಶೇ. 56.3 ರಷ್ಟು ಗಣನೀಯ ಹೆಚ್ಚಳ ಕಂಡುಬಂದಿದೆ. ದೈನಂದಿನ ವ್ಯಾಗನ್ ಲೋಡಿಂಗ್ ಕೂಡ 2,275ಕ್ಕೆ ಏರಿಕೆಯಾಗಿದ್ದು, ರೈಲ್ವೆಯ ಕಾರ್ಯಾಚರಣೆಯ ದಕ್ಷತೆಯನ್ನು ಎತ್ತಿ ತೋರಿಸುತ್ತದೆ.

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

02/06/2026 03:26 pm

Cinque Terre

10.55 K

Cinque Terre

1

ಸಂಬಂಧಿತ ಸುದ್ದಿ