ಕುಂದಗೋಳ : ಬೇಸಿಗೆ ರಜೆ ಮುಗಿಸಿ ಮತ್ತೆ ಶೈಕ್ಷಣಿಕ ವರ್ಷದ ಆರಂಭದ ಮೊದಲ ದಿನ ಶಾಲೆಗೆ ಆಗಮಿಸಿದ ವಿದ್ಯಾರ್ಥಿಗಳನ್ನು ಶಾಲೆ ಶಿಕ್ಷಕರು ಹೂಗುಚ್ಚ ನೀಡ ಸಿಹಿ ತಿನ್ನಿಸಿ ಸ್ವಾಗತ ಕೋರಿದ್ದಾರೆ.
ಹೌದು ! ಕುಂದಗೋಳ ತಾಲೂಕಿನ ಗುಡೇನಕಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಶೈಕ್ಷಣಿಕ ವರ್ಷದ ಮೊದಲ ದಿನ ಶಾಲೆಯನ್ನು ತಳಿರು ತೋರಣದಿಂದ ಶೃಂಗರಿಸಿ, ಒಂದನೇ ತರಗತಿ ಬರುವ ಮಕ್ಕಳನ್ನು ಹಾರ ಹಾಕಿ ಸಿಹಿ ತಿನ್ನಿಸಿ ಸ್ವಾಗತ ಕೋರಲಾಗಿದೆ.
ಶಾಲೆ ಮುಖ್ಯೋಪಾಧ್ಯಾಯ ಎಸ್.ಎಮ್.ಮುಲ್ಲಾ, ಎಸ್ಡಿಎಂಸಿ ಸದಸ್ಯರಾದ ಲಕ್ಷ್ಮೀ ಮಲ್ಲಿಗವಾಡ, ಉಮೇಶಕುಮಾರ, ಪುಷ್ಪಾ ಬಡಿಗೇರ್, ನೇತ್ರಾ ಬೆಳ್ಳಟ್ಟಿ, ಪಾಲಕರು ಹಾಗೂ ಶಾಲಾ ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಶ್ರೀಧರ ಪೂಜಾರ, ಪಬ್ಲಿಕ್ ನೆಕ್ಸ್ಟ್ ಕುಂದಗೋಳ
Kshetra Samachara
01/06/2026 07:28 pm
LOADING...