ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜೂನ್ 7ರಂದು ಹುಬ್ಬಳ್ಳಿಯಲ್ಲಿ ‘ರನ್ ಫಾರ್ ನೇಚರ್ 4.0’

ಹುಬ್ಬಳ್ಳಿ: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಗ್ರೀನ್ ಕರ್ನಾಟಕ ಅಸೋಸಿಯೇಷನ್ (ರಿ), ವಸುಂಧರಾ ಫೌಂಡೇಶನ್ ಹಾಗೂ ವಿ ಕೇರ್ ಫೌಂಡೇಶನ್ ಸಹಯೋಗದಲ್ಲಿ ಜೂನ್ 7ರಂದು ಬೆಳಿಗ್ಗೆ 6:30ಕ್ಕೆ ತೋಳಂಕೆರೆ ಸರೋವರದಿಂದ ಟೆಂಡರ್ S.U.R.E. ರಸ್ತೆಯವರೆಗೆ ‘ರನ್ ಫಾರ್ ನೇಚರ್ 4.0’ ಕಾರ್ಯಕ್ರಮ ಆಯೋಜಿಸಲಾಗಿದೆ.

ಚನ್ನು ಹೊಸಮನಿ ಅವರ ನೇತೃತ್ವದಲ್ಲಿ ನಡೆಯಲಿರುವ 3 ಕಿ.ಮೀ. ಮತ್ತು 5 ಕಿ.ಮೀ. ಓಟದಲ್ಲಿ ಸಾರ್ವಜನಿಕರು ಭಾಗವಹಿಸಬಹುದು.

ವಿದ್ಯಾರ್ಥಿಗಳಿಗೆ ₹200 ಹಾಗೂ ಸಾರ್ವಜನಿಕರಿಗೆ ₹300 ನೋಂದಣಿ ಶುಲ್ಕ ನಿಗದಿಪಡಿಸಲಾಗಿದ್ದು, ಭಾಗವಹಿಸುವವರಿಗೆ ಟಿ-ಶರ್ಟ್, ಪದಕ, ಪ್ರಮಾಣಪತ್ರ ಹಾಗೂ ಬ್ಯಾಗ್ ನೀಡಲಾಗುತ್ತದೆ ಎಂದು ಸಂಘಟಕರು ತಿಳಿಸಿದ್ದಾರೆ.

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

03/06/2026 07:13 pm

Cinque Terre

36.24 K

Cinque Terre

1

ಸಂಬಂಧಿತ ಸುದ್ದಿ