ಧಾರವಾಡ: ವೈದ್ಯಕೀಯ ಕ್ಷೇತ್ರಕ್ಕೆ ಸೀಮಿತವಾಗದೆ, ಸಾಹಿತ್ಯ ಮತ್ತು ಸಾಮಾಜಿಕ ಸೇವೆಯ ಮೂಲಕ ಮಕ್ಕಳ ತಜ್ಞ ವೈದ್ಯ ಡಾ. ರಾಜನ್ ದೇಶಪಾಂಡೆ ಅವರು ಸಮಾಜಕ್ಕೆ ನೀಡುತ್ತಿರುವ ಕೊಡುಗೆ ಅಪಾರ ಎಂದು ಭಾಷಾತಜ್ಞ ಹಾಗೂ ಪದ್ಮಶ್ರೀ ಡಾ.ಗಣೇಶ ದೇವಿ ತಿಳಿಸಿದರು.
ಧಾರವಾಡ ಆಲೂರು ವೆಂಕಟರಾವ ಸಭಾಭವನದಲ್ಲಿ ಮಕ್ಕಳ ಅಕಾಡೆಮಿ, ಆರ್.ಕೆ ಫೌಂಡೇಶನ್ ಧಾರವಾಡ ವತಿಯಿಂದ ಡಾ.ರಾಜನ್ ದೇಶಪಾಂಡೆ ಅವರು ಬರೆದ ನಾಲ್ಕು ಪುಸ್ತಕಗಳ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದ ಅವರು, ಒತ್ತಡದ ಮಧ್ಯೆ ಸಾಹಿತ್ಯ ಕೃಷಿಯಲ್ಲಿ ತೊಡಗಿರುವ ಡಾ. ರಾಜನ್ ದೇಶಪಾಂಡೆ ಅವರು ವೈದ್ಯಕೀಯ ವೃತ್ತಿಯ ಅನುಭವಗಳ ಜೊತೆಗೆ ಬದುಕು ಮತ್ತು ಸಮಾಜದ ಕುರಿತಾಗಿ ಅನೇಕ ಪ್ರೇರಣಾದಾಯಿ ಪುಸ್ತಕಗಳನ್ನು ಬರೆದು ಯುವ ಲೇಖಕರಿಗೆ ಪ್ರೇರಣೆಯಾಗಿದ್ದಾರೆ ಎಂದು ತಿಳಿಸಿದರು.
ಹಿರಿಯ ಸಾಹಿತಿ ಡಾ.ಸಿದ್ಧಲಿಂಗ ಪಟ್ಟಣಶೆಟ್ಟಿ ಮಾತನಾಡಿ, ಮಕ್ಕಳ ಕಲ್ಯಾಣಕ್ಕಾಗಿ ಮಕ್ಕಳ ಅಕಾಡೆಮಿ ಮತ್ತು ಆರ್.ಕೆ. ಫೌಂಡೇಶನ್ ಟ್ರಸ್ಟ್ ಆರಂಭಿಸಿದ ಡಾ. ರಾಜನ್ ದೇಶಪಾಂಡೆ ಅವರು ವೈದ್ಯಕೀಯ ಹಾಗೂ ಶೈಕ್ಷಣಿಕ ಸೇವೆಗಳನ್ನು ನೀಡುತ್ತಿದ್ದಾರೆ. ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಇತರರಿಗೆ ಮಾದರಿಯಾಗಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಪ್ರೊ.ರಾಘವೇಂದ್ರ ಪಾಟೀಲ, ಹಿರಿಯ ಲೇಖಕಿ ಡಾ.ಜಯಾ ಕುರೇಕರ್, ಹುಬ್ಬಳ್ಳಿ ಸಾಹಿತ್ಯ ಪ್ರಕಾಶನದ ಸುಬ್ರಹ್ಮಣ್ಯ ಎಂ.ಕೆ ಅವರು ಮಾತನಾಡಿ, ಡಾ.ರಾಜನ್ ದೇಶಪಾಂಡೆ ಅವರ ವೈದ್ಯಕೀಯ ಮತ್ತು ಸಾಮಾಜಿಕ ಕೊಡುಗೆಗಳನ್ನು ಈ ಕಾರ್ಯಕ್ರಮದಲ್ಲಿ ಡಾ. ಗಣೇಶ ದೇವಿ ಅವರು ಮುಕ್ತ ಕಂಠದಿಂದ ಶ್ಲಾಘಿಸಿದರು.
Kshetra Samachara
31/05/2026 10:04 pm
LOADING...