ಧಾರವಾಡ: ಧಾರವಾಡದ ಚರಂತಿಮಠ ಗಾರ್ಡನ್ ಸಮುದಾಯ ಭವನದಲ್ಲಿ, ನಾಟ್ಯ ಬೈರವಿ ಕಲಾ ಅಕಾಡೆಮಿ ಸಹಯೋಗದೊಂದಿಗೆ ಆಯೋಜಿಸಲಾದ ಜಾನಪದ ಜಾತ್ರೆ, ಜಿಲ್ಲಾ ಮಟ್ಟದ ವೈಯಕ್ತಿಕ ಕಿರಿಯರ ನೃತ್ಯ ಸ್ಪರ್ಧೆ ಹಾಗೂ ನಾಟ್ಯ ಕಲಾಶ್ರೀ ಪ್ರಶಸ್ತಿ ವಿತರಣಾ ಕಾರ್ಯಕ್ರಮವನ್ನು ಸರ್ವಧರ್ಮ ಸಮಾಜ ಸೇವಕ ಡಾ. ರಮೇಶ ಮಹಾದೇವಪ್ಪನವರ ಅವರು
ಉದ್ಘಾಟಿಸಿದರು. ನಂತರ ಪ್ರತಿಭಾವಂತ ಕಲಾವಿದರಿಗೆ ಪ್ರಶಸ್ತಿ ವಿತರಿಸಿದರು.
ಜಾನಪದ ಕಲೆ, ಸಂಸ್ಕೃತಿ ಮತ್ತು ನೃತ್ಯ ಪರಂಪರೆಯನ್ನು ಉಳಿಸಿ ಬೆಳೆಸುವ ಇಂತಹ ಕಾರ್ಯಕ್ರಮಗಳು ನಮ್ಮ ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವುದರ ಜೊತೆಗೆ, ನಮ್ಮ ಸಾಂಸ್ಕೃತಿಕ ವೈಭವವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಮಹತ್ವದ ಕಾರ್ಯ ಮಾಡುತ್ತವೆ. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲ ಪುಟಾಣಿ ನೃತ್ಯಪಟುಗಳ ಅದ್ಭುತ ಪ್ರದರ್ಶನಗಳು ಮನಸೂರೆಗೊಂಡವು. ಅವರ ಪ್ರತಿಭೆ, ಪರಿಶ್ರಮ ಮತ್ತು ಆತ್ಮವಿಶ್ವಾಸಕ್ಕೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಸತೀಶ್ ತುರುಮರಿ, ಪುಷ್ಪ ನವಲಗುಂದ್, ಸೀಮಾ ಸಾಣಿಕೊಪ್ಪ, ಡಾ. ಪ್ರಕಾಶ್ ಮಲ್ಲಿಗವಾಡ, ಡಾ. ಪ್ರಕಾಶ್ ಕ್ಷತ್ರಿಯ, ಸಂಜೀವ್ ಕುಂದಗೋಳ ಸೇರಿದಂತೆ ಹಲವಾರು ಗಣ್ಯರು, ಕಲಾಭಿಮಾನಿಗಳು ಹಾಗೂ ನೃತ್ಯಪಟುಗಳು ಉಪಸ್ಥಿತರಿದ್ದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
03/06/2026 04:29 pm
LOADING...