ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಾಲಾ ವಿದ್ಯಾರ್ಥಿನಿಯರಿಗೆ ಮೂರು ದಿನ ಮುಟ್ಟಿನ ರಜೆ - ಕೇರಳ ಸರ್ಕಾರದಿಂದ ಪ್ರಸ್ತಾವನೆ

ತಿರುವನಂತಪುರಂ: ಕೇರಳದ ಯುಡಿಎಫ್ ಸರ್ಕಾರವು ಶಾಲಾ ವಿದ್ಯಾರ್ಥಿನಿಯರಿಗೆ ಮುಟ್ಟಿನ ರಜೆ ನೀಡುವ ಮಹತ್ವದ ಪ್ರಸ್ತಾವವನ್ನು ಮಂಡಿಸಿದೆ. ಶುಕ್ರವಾರ ರಾಜ್ಯ ವಿಧಾನಸಭೆಯ ಜಂಟಿ ಅಧಿವೇಶನದಲ್ಲಿ ಸರ್ಕಾರದ ನೀತಿ ಕುರಿತು ರಾಜ್ಯಪಾಲರ ಭಾಷಣದ ಸಂದರ್ಭದಲ್ಲಿ ಈ ಪ್ರಸ್ತಾವನೆಯನ್ನು ಮುಂದಿಡಲಾಯಿತು. ಪ್ರಸ್ತಾವಿತ ‘ಋತುಚಕ್ರದ ಘನತೆ ಯೋಜನೆ’ಯಡಿ, ಪ್ರತಿ ತಿಂಗಳು ವಿದ್ಯಾರ್ಥಿನಿಯರಿಗೆ ಮೂರು ದಿನಗಳ ರಜೆ ನೀಡಲು ಉದ್ದೇಶಿಸಲಾಗಿದೆ.

ಮುಟ್ಟಿನ ರಜೆಯ ಅವಧಿಯಲ್ಲಿ ತಪ್ಪಿಹೋದ ತರಗತಿಗಳನ್ನು ಸರಿದೂಗಿಸಲು ವಾರಾಂತ್ಯದಲ್ಲಿ (ಶನಿವಾರ ಮತ್ತು ಭಾನುವಾರ) ವಿಶೇಷ ತರಗತಿಗಳನ್ನು ನಡೆಸಲು ಯೋಜಿಸಲಾಗಿದೆ. ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಅವರು ತಮ್ಮ ಭಾಷಣದಲ್ಲಿ, ‘‘ವಿದ್ಯಾರ್ಥಿನಿಯರ ರಕ್ಷಣೆಗೆ ನಮ್ಮ ಬದ್ಧತೆಯು ‘ಋತುಚಕ್ರದ ಘನತೆ ಯೋಜನೆ’ಯಲ್ಲಿ ಪ್ರತಿಫಲಿಸುತ್ತದೆ. ಇದರ ಅಡಿಯಲ್ಲಿ, ಶೈಕ್ಷಣಿಕ ಸಂಸ್ಥೆಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಹೆಣ್ಣುಮಕ್ಕಳು ಮತ್ತು ಮಹಿಳೆಯರಿಗೆ ಪೂರಕ ವಾತಾವರಣ ನಿರ್ಮಿಸಲು ನಾವು ಉದ್ದೇಶಿಸಿದ್ದೇವೆ’’ ಎಂದು ತಿಳಿಸಿದರು.

Edited By : Nagaraj Tulugeri
PublicNext

PublicNext

30/05/2026 07:13 am

Cinque Terre

20.88 K

Cinque Terre

0

ಸಂಬಂಧಿತ ಸುದ್ದಿ