ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: 1413 ಕೋಟಿ ಆಸ್ತಿ ಒಡೆಯ 'ಡಿಕೆ' ಹೆಸರಲ್ಲಿರೋದು ಒಂದೇ ಒಂದು ಹಳೆಯ ಕಾರು!

ಬೆಂಗಳೂರು: ಜೂನ್ 3 ರಂದು ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ತೆಗೆದುಕೊಳ್ಳಲಿರುವ ಡಿ.ಕೆ.ಶಿವಕುಮಾರ್ ಅವರು ಎಷ್ಟು ಮೌಲ್ಯದ ಆಸ್ತಿಯ ಒಡೆಯರು? ಅವರ ಬಳಿ ಇರುವ ಕಾರುಗಳೆಷ್ಟು? ಅಂತಾ ತಿಳಿದುಕೊಳ್ಳಬೇಕೆಂಬುದು ಒಂದು ಸಾಮಾನ್ಯ ಕುತೂಹಲವಷ್ಟೆ. ಯಾರೇ ರಾಜ್ಯದ ಮುಖ್ಯಮಂತ್ರಿಯಾದರೂ ಅವರು ಮತ್ತು ಅವರ ಕುಟುಂಬಸ್ಥರು ಎಷ್ಟು ಮೌಲ್ಯದ ಆಸ್ತಿ-ಪಾಸ್ತಿ ಹೊಂದಿದ್ದಾರೆಂಬ ಸಹಜ ಮತ್ತು ಸಾಮಾನ್ಯವಾದ ಉದ್ಭವಿಸುತ್ತದೆ.

ಈ ದಿಶೆಯಲ್ಲಿ ಡಿಕೆಶಿ ಅವರು ಸಂಪಾದಿಸಿದ ಒಟ್ಟು ಆಸ್ತಿ ಮೌಲ್ಯವು ಎಷ್ಟು? ಎಂಬ ಪ್ರಶ್ನೆ ಮೂಡಿದಾಗ, ಡಿಕೆಶಿ ಅವರು 2023 ರ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಅಫಿಡವಿಟ್ ನಲ್ಲಿ 1413ಕೋಟಿಯ ಮೌಲ್ಯವನ್ನು ತೋರಿಸಲಾಗಿದೆ! ಜೊತೆಗೆ ಟೊಯೋಟಾ ಕಂಪನಿಯ ಇಪ್ಪತ್ನಾಲ್ಕು ವರ್ಷಗಳಷ್ಟು ಹಳೆಯದಾದ ಕ್ವಾಲಿಸ್ ಕಾರೊಂದನ್ನು ಹೊಂದಿದ್ದಾರಷ್ಟೆ!

ನೀವೇನಾದರೂ ಇತ್ತೀಚಿನ ಮಾಡಲ್ ಗಳಾದ ಆಡಿ, ರೇಂಜ್ ರೋವರ್ ಸೇರಿದಂತೆ ಮೊದಲಾದ ಯಾವುದಾದರೂ ಕಾರ್ ಗಳಿರಬಹುದಲ್ಲವೆ? ಅಂತಾ ಕೇಳಿದರೆ ಉಹೂಂ, 'ಡಿಕೆ' ಸಾಹೇಬರ ಹೆಸರಲ್ಲಿರೋದು ಬರೀ ಒಂದೇ ಒಂದು ಕಾರು ಅಂದರೆ ನೀವಿದನ್ನು ನಂಬಲೇಬೇಕು.

Edited By :
PublicNext

PublicNext

31/05/2026 10:28 pm

Cinque Terre

1.64 K

Cinque Terre

0

ಸಂಬಂಧಿತ ಸುದ್ದಿ