ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಂಕಷ್ಟದ ನಡುವೆಯೂ ಒಂದಾದ ಜೋಡಿ, ಆಸ್ಪತ್ರೆಯಲ್ಲೇ ಪ್ರೇಯಸಿಯ ಕೈ ಹಿಡಿದ ಯುವಕ

ಪ್ರೀತಿ ಅಂದ್ರೆ ಕೇವಲ ಸುಖದ ದಿನಗಳಲ್ಲಿ ಜೊತೆಯಾಗಿ ಇರೋದಲ್ಲ, ಕಷ್ಟದ ಕಾಲದಲ್ಲಿ ನೆರಳಾಗಿ ನಿಲ್ಲುವುದು. ಎಂತಹದ್ದೇ ಪರಿಸ್ಥಿತಿ ಬರಲಿ, ನಿನ್ನ ಕೈ ಬಿಡಲ್ಲ ಎಂದು ಆಸ್ಪತ್ರೆಯ ಬೆಡ್ ಮೇಲಿದ್ದ ಪ್ರೇಯಸಿಯ ಕೈ ಹಿಡಿದು ಯುವಕನೊಬ್ಬ ಮದುವೆಯಾದ ಹೃದಯಸ್ಪರ್ಶಿ ಘಟನೆಯೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಈ ಅಪರೂಪದ ಮದುವೆ ನೆರೆದಿದ್ದವರ ಕಣ್ಣಲ್ಲಿ ನೀರು ತರಿಸಿದೆ.

ಸಾಮಾನ್ಯವಾಗಿ ಮದುವೆ ಅಂದಮೇಲೆ ಅದ್ಧೂರಿ ಮಂಟಪ, ನೂರಾರು ಜನ ನೆಂಟರು, ಲೈಟಿಂಗ್ಸ್ ಹೀಗೆ ಸಂಭ್ರಮ ಸಡಗರ ಇರುತ್ತೆ. ಆದರೆ, ಇಲ್ಲೊಂದು ಜೋಡಿಯ ಮದುವೆ ಆಸ್ಪತ್ರೆಯ ವಾರ್ಡ್‌ನಲ್ಲಿ ನಡೆದಿದೆ. ಮದುವೆ ನಿಶ್ಚಯವಾಗಿದ್ದ ಯುವತಿಯೊಬ್ಬಳು ದುರದೃಷ್ಟವಶಾತ್ ಅಪಘಾತಕ್ಕೀಡಾಗಿ ಆಸ್ಪತ್ರೆ ಸೇರಿದ್ದಳು. ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯ ಬೆಡ್ ಮೇಲಿದ್ದ ಆಕೆಯನ್ನು ನೋಡಿ ಆಕೆಯ ಭಾವಿ ಪತಿ ಧೃತಿಗೆಡಲಿಲ್ಲ. ಬದಲಿಗೆ, ಈ ಕಷ್ಟದ ಸಮಯದಲ್ಲಿ ತಾನು ಆಕೆಗೆ ಧೈರ್ಯ ತುಂಬಬೇಕು ಎಂದು ನಿರ್ಧರಿಸಿದ ಆತ, ಮದುವೆಯನ್ನು ಮುಂದೂಡದೆ ಆಸ್ಪತ್ರೆಯಲ್ಲೇ ಆಕೆಯನ್ನು ಮದುವೆಯಾಗಿದ್ದಾನೆ.

ವೈದ್ಯರು ಮತ್ತು ಆಸ್ಪತ್ರೆಯ ಸಿಬ್ಬಂದಿಗಳ ಸಮ್ಮುಖದಲ್ಲೇ ಈ ಇಬ್ಬರ ಮದುವೆ ನೆರವೇರಿದೆ. ಕಷ್ಟದ ಕ್ಷಣವನ್ನು ಅತ್ಯಂತ ಸುಂದರ ಮತ್ತು ಭಾವುಕ ಕ್ಷಣವಾಗಿ ಬದಲಾಯಿಸಿದ ಈ ಯುವಕನ ಪ್ರೀತಿಗೆ ನೆಟ್ಟಿಗರು ಫಿದಾ ಆಗಿದ್ದಾರೆ. ನಿಜವಾದ ಪ್ರೀತಿಗೆ ಇದಕ್ಕಿಂತ ದೊಡ್ಡ ಉದಾಹರಣೆ ಬೇಕಾ? ಎಂದು ಈ ವಿಡಿಯೋಗೆ ಜನರು ಕಮೆಂಟ್ ಮಾಡುತ್ತಿದ್ದು, ಜೋಡಿಗೆ ಹಾರೈಸುತ್ತಿದ್ದಾರೆ.

Edited By : Nirmala Aralikatti
PublicNext

PublicNext

30/05/2026 01:55 pm

Cinque Terre

20.74 K

Cinque Terre

1

ಸಂಬಂಧಿತ ಸುದ್ದಿ