ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕನಿಷ್ಠ ವೇತನ ಶೇ. 60 ರಷ್ಟು ಭರ್ಜರಿ ಹೆಚ್ಚಳ - ಸಚಿವ ಸಂತೋಷ್ ಲಾಡ್ ಐತಿಹಾಸಿಕ ತೀರ್ಮಾನ!

ಬೆಂಗಳೂರು: ರಾಜ್ಯದ ಕೋಟ್ಯಂತರ ಶ್ರಮಿಕ ವರ್ಗದ ಆರ್ಥಿಕ ಭದ್ರತೆಗೆ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಅತ್ಯಂತ ಮಹತ್ವದ ಮತ್ತು ಐತಿಹಾಸಿಕ ನಿರ್ಧಾರವೊಂದನ್ನು ಪ್ರಕಟಿಸಿದೆ. ರಾಜ್ಯದ ಒಟ್ಟು 81 ಅನುಸೂಚಿತ ಉದ್ಯೋಗಗಳಲ್ಲಿ (Scheduled Employments) ದುಡಿಯುತ್ತಿರುವ ಕಾರ್ಮಿಕರ ಸರಾಸರಿ ಕನಿಷ್ಠ ವೇತನವನ್ನು ಬರೋಬ್ಬರಿ ಶೇಕಡಾ 60 ರಷ್ಟು ಹೆಚ್ಚಳ ಮಾಡಲಾಗಿದ್ದು, ಇದರಿಂದ 1 ಕೋಟಿಗೂ ಅಧಿಕ ಅಸಂಘಟಿತ ಮತ್ತು ಖಾಯಂ ವಲಯದ ಕಾರ್ಮಿಕರಿಗೆ ನೇರ ಆರ್ಥಿಕ ಅನುಕೂಲವಾಗಲಿದೆ ಎಂದು ಕರ್ನಾಟಕ ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳಲ್ಲಿ ಅಧಿಕೃತವಾಗಿ ಪ್ರಕಟಿಸಿದೆ.

ಮೇ 22-23 ರಂದು ಅಧಿಕೃತ ಗಜೆಟ್ ಪ್ರಕಟಣೆ

ಕನಿಷ್ಠ ವೇತನ ಕಾಯ್ದೆಯಡಿ ಕಾರ್ಮಿಕ ವಲಯದಿಂದ ದಶಕಗಳಿಂದ ಕೇಳಿಬರುತ್ತಿದ್ದ ಸುದೀರ್ಘ ಬೇಡಿಕೆಯನ್ನು ಈಡೇರಿಸುವ ನಿಟ್ಟಿನಲ್ಲಿ ಸರ್ಕಾರವು 2026ರ ಮೇ 22 ಮತ್ತು 23 ರಂದು ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ. ನೂತನ ನಿಯಮದ ಪ್ರಕಾರ ವಲಯ (Zones) ಮತ್ತು ಕೌಶಲ್ಯದ ಆಧಾರದ ಮೇಲೆ ಮಾಸಿಕ ಕನಿಷ್ಠ ವೇತನವನ್ನು ಈ ಕೆಳಗಿನಂತೆ ನಿಗದಿಪಡಿಸಲಾಗಿದೆ:

* ವಲಯ-3 ರ ನೈಪುಣ್ಯ ರಹಿತ (Unskilled) ಕಾರ್ಮಿಕರಿಗೆ ಕನಿಷ್ಠ ಮಾಸಿಕ ವೇತನ ₹19,300

* ವಲಯ-1 ರ ಅತ್ಯಂತ ನುರಿತ (Highly Skilled) ಕಾರ್ಮಿಕರಿಗೆ ಗರಿಷ್ಠ ಮಾಸಿಕ ವೇತನ ₹31,100 ಕ್ಕೆ ಏರಿಕೆ.

ಈ ಐತಿಹಾಸಿಕ ತೀರ್ಮಾನದ ಕುರಿತು ಮಾತನಾಡಿರುವ ರಾಜ್ಯ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು, "ಕನಿಷ್ಠ ವೇತನ ಕಾಯ್ದೆಯಡಿ ಕಾರ್ಮಿಕರು ಬಹಳ ದಿನಗಳಿಂದ ಇಟ್ಟಿದ್ದ ಬೇಡಿಕೆಯನ್ನು ನಮ್ಮ ಸರ್ಕಾರ ಈಡೇರಿಸಿದೆ. ಈ ವೇತನ ಪರಿಷ್ಕರಣೆಯು ಬಡ ಮತ್ತು ಮಧ್ಯಮ ವರ್ಗದ ಕಾರ್ಮಿಕರ ಜೀವನಮಟ್ಟವನ್ನು ಸುಧಾರಿಸಲು ಮತ್ತು ಅವರಿಗೆ ಸಾಮಾಜಿಕ ಭದ್ರತೆ ನೀಡಲು ಸಹಕಾರಿಯಾಗಲಿದೆ," ಎಂದು ತಿಳಿಸಿದ್ದಾರೆ.

Edited By : Nagaraj Tulugeri
PublicNext

PublicNext

30/05/2026 02:08 pm

Cinque Terre

19.15 K

Cinque Terre

0

ಸಂಬಂಧಿತ ಸುದ್ದಿ