ಶಿವಮೊಗ್ಗ: ಮನೆಗೆ ನುಗ್ಗಿ ನಗದು ದೋಚಿ ಪರಾರಿಯಾಗಿದ್ದ ಆರೋಪಿಗಳನ್ನ ಬಂಧಿಸುವಲ್ಲಿ ಶಿವಮೊಗ್ಗ ವಿನೋಬನಗರ ಪೊಲೀಸರು ಯಶಸ್ವಿಯಾಗಿದ್ದಾರೆ.
ನಗರದ ಕಾಶೀಪುರ ಲಕ್ಕಪ್ಪ ಲೇಔಟ್ ನ ಸೋಮಶೇಖರ್ ಎಂಬುವರ ಮನೆಯಲ್ಲಿ ಮೇ 26 ರಂದು ಕಳ್ಳತನವಾಗಿತ್ತು. ಮನೆಯಲ್ಲಿದ್ದ 7 ಲಕ್ಷ ನಗದು ದೋಚಿ ಕಳ್ಳರು ಪರಾರಿಯಾಗಿದ್ದರು. ಪ್ರಕರಣ ಸಂಬಂಧ ವಿನೋಬನಗರದಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಪ್ರಕರಣ ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಟಿಪ್ಪುನಗರದ ಮೊಹಮದ್ ಸಲೀಮ್ ಹಾಗೂ ಮೊಹಮದ್ ರಜಾಕ್ ಬಂಧಿತ ಆರೋಪಿಗಳು. ಬಂಧಿತ ಆರೋಪಿಗಳಿಂದ 5,13,000 ನಗದನ್ನ ಪೊಲೀಸರು ವಶಪಡಿಸಿಕೊಂಡಿದ್ದಾನೆ.
PublicNext
30/05/2026 08:39 pm
LOADING...