ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿವಮೊಗ್ಗ: ಬೈಕ್‌ನಲ್ಲಿ ಸಾಗುವಾಗ ಅಡಿಕೆ ಮರ ಬಿದ್ದು ಕಾರ್ಮಿಕ ಸಾವು

ಶಿವಮೊಗ್ಗ: ತೀರ್ಥಹಳ್ಳಿ ತಾಲೂಕಿನ ನೆಲ್ಲಿಸರ ಬಾಳಗಾರು ಸಂಪರ್ಕದ ರಸ್ತೆಯ ಮಾರ್ಗದಲ್ಲಿ ಬೈಕ್ ನಲ್ಲಿ ಹೋಗುವಾಗ ಕಾರ್ಮಿಕ ಮಾಯಕಣ್ಣನ್ (61) ತಲೆಯ ಮೇಲೆ ಅಡಿಕೆ ಮರ ಬಿದ್ದು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನಡೆದಿದೆ.

ತೀರ್ಥಹಳ್ಳಿ ಪಟ್ಟಣದ ಗಾಂಧಿನಗರದ ನಿವಾಸಿ ಮನೆಯೊಂದಕ್ಕೆ ಹಾಕಿರುವ ಕಲ್ಲಿನ ಹಣ ಪಡೆದು ವಾಪಸಾಗುತ್ತಿದ್ದರು. ಅಬ್ಬಿಗದ್ದೆಯ ತೋಟದಲ್ಲಿ ಹಳೆಯ ಅಡಿಕೆ ಮರಗಳನ್ನು ತೆರವು ಮಾಡುವ ಸಂಬಂಧ ಮರಗಳನ್ನು ಕಡಿಯುತ್ತಿದ್ದರು. ಈ ವೇಳೆ ಆಕಸ್ಮಿಕವಾಗಿ ಅಡಿಕೆ ಮರವೊಂದು ರಸ್ತೆಗೆ ವಾಲಿದೆ. ಸ್ಥಳದಲ್ಲಿಯೇ ಸಂಚರಿಸುತ್ತಿದ್ದ ಮಾಯಕಣ್ಣನ್ ತಲೆಯ ಮೇಲೆ ಬಿದ್ದಿದೆ. ಅಡಿಕೆ ಮರಬಿದ್ದ ರಭಸಕ್ಕೆ ಸ್ಥಳದಲ್ಲಿಯೇ ಮಾಯಕಣ್ಣನ್ ಅಸುನೀಗಿದ್ದಾರೆ. ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Vijay Kumar
PublicNext

PublicNext

31/05/2026 10:26 am

Cinque Terre

6.45 K

Cinque Terre

0

ಸಂಬಂಧಿತ ಸುದ್ದಿ