ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಆಟೋ ಚಾಲಕನ ಮೇಲೆ ಪ್ರಯಾಣಿಕರ ಹಿಂದಿವಾಲಗಳ ದರ್ಪ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಆಟೋ ಚಾಲಕನೊಬ್ಬನ ಮೇಲೆ ಪ್ರಯಾಣಿಕರು ದರ್ಪ ತೋರಿರುವ ಘಟನೆ ನಡೆದಿದೆ. ಹೆಚ್ಚಿನ ಸಾಮಾನು ಮತ್ತು ಪ್ರಯಾಣಿಕರನ್ನು ಆಟೋದಲ್ಲಿ ಕರೆದೊಯ್ಯಲು ನಿರಾಕರಿಸಿದ ಕಾರಣಕ್ಕೆ ಮಹಿಳೆಯೊಬ್ಬರು ಸೇರಿದಂತೆ ನಾಲ್ವರು ಪ್ರಯಾಣಿಕರು ಚಾಲಕನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಭಾಷಾ ವೈಷಮ್ಯದ ಮಾತುಗಳನ್ನಾಡಿದ್ದಾರೆ. ಈ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ನಾಲ್ವರು ಪ್ರಯಾಣಿಕರು ಆಟೋ ಒಂದನ್ನು ಬುಕ್ ಮಾಡಿದ್ದರು. ಆದರೆ, ಅವರು ಅತಿಯಾದ ಲಗೇಜ್ ಹೊಂದಿದ್ದ ಕಾರಣ, ಚಾಲಕ ಅಷ್ಟೊಂದು ಸಾಮಾನು ಮತ್ತು ಜನರನ್ನು ಆಟೋದಲ್ಲಿ ಕೊಂಡೊಯ್ಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಇದರಿಂದ ಆಕ್ರೋಶಗೊಂಡ ಮಹಿಳಾ ಪ್ರಯಾಣಿಕರು, ಚಾಲಕನಿಗೆ ಮನಬಂದಂತೆ ಬೈದಿದ್ದಾರೆ. "ಇದು ನಿನ್ನ ಅಪ್ಪನ ರಸ್ತೆಯಲ್ಲ, ನಮ್ಮ ದುಡ್ಡಿನಿಂದ ನೀನು ಬದುಕುತ್ತೀಯಾ, ನಾನು ಬುಕ್ ಮಾಡಿದರೆ ನಿನ್ನ ಜೀವನ ನಡೆಯುತ್ತೆ, ಹಿಂದಿಯಲ್ಲಿ ಮಾತಾಡು" ಎಂದು ಅಬ್ಬರಿಸಿ ಆಟೋ ಚಾಲಕನಿಗೆ ಅವಮಾನ ಮಾಡಿದ್ದಾರೆ.

ಈ ಘಟನೆಯ ಸಂಪೂರ್ಣ ವಿಡಿಯೋವನ್ನು ಮತ್ತೊಬ್ಬರು ಚಿತ್ರೀಕರಿಸಿದ್ದು, ಅದು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ, ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಪೊಲೀಸರು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ವಿಡಿಯೋದ ಆಧಾರದ ಮೇಲೆ ಮಾಹಿತಿ ಕಲೆಹಾಕಿ, ತನಿಖೆ ನಡೆಸುತ್ತಿದ್ದಾರೆ.

Edited By : Shivu K
PublicNext

PublicNext

31/05/2026 02:57 pm

Cinque Terre

15.91 K

Cinque Terre

0