ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಜಯಪುರ-ಯಶವಂತಪುರ ಹೈಸ್ಪೀಡ್ ರೈಲು ಸೇವೆ ವಾರಕ್ಕೆ ಎರಡು ದಿನಕ್ಕೆ ವಿಸ್ತರಣೆ : ಸಚಿವ ಎಂಬಿ ಪಾಟೀಲ ಹರ್ಷ

ವಾರಕ್ಕೊಮ್ಮೆ ಸಂಚರಿಸುತ್ತಿದ್ದ ವಿಜಯಪುರ–ಯಶವಂತಪುರ ಹೈಸ್ಪೀಡ್ ರೈಲು ಸೇವೆಯನ್ನು ಇದೇ ಜೂನ್ 1ರಿಂದ ವಾರದಲ್ಲಿ ಎರಡು ದಿನಗಳಿಗೆ ವಿಸ್ತರಿಸಲಾಗಿದೆ. ಈ ಮಹತ್ವದ ನಿರ್ಧಾರದಿಂದ ಬಸವನಾಡು ವಿಜಯಪುರ ಮತ್ತು ರಾಜಧಾನಿ ಬೆಂಗಳೂರು ನಡುವಿನ ಸಂಪರ್ಕ ಮತ್ತಷ್ಟು ಬಲಗೊಳ್ಳಲಿದ್ದು, ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ. ಈ ಹಿಂದೆ ಮೇ 16ರಿಂದ ಈ ರೈಲು ಸೇವೆ ವಾರಕ್ಕೊಮ್ಮೆ ಆರಂಭಗೊಂಡಿತ್ತು.

ಈ ಹೈಸ್ಪೀಡ್ ರೈಲು ಪ್ರಯಾಣದ ಅವಧಿಯನ್ನು ಗಣನೀಯವಾಗಿ ಕಡಿಮೆ ಮಾಡಿದೆ. ಈ ಮೊದಲು 15-16 ಗಂಟೆಗಳವರೆಗೆ ತೆಗೆದುಕೊಳ್ಳುತ್ತಿದ್ದ ಪ್ರಯಾಣದ ಅವಧಿಯನ್ನು, ಈ ರೈಲು ಸುಮಾರು 11 ಗಂಟೆಗಳಿಗೆ ಇಳಿಸಿದೆ. ಇದರಿಂದ ಪ್ರಯಾಣಿಕರ ಅಮೂಲ್ಯ ಸಮಯ ಉಳಿತಾಯವಾಗುತ್ತಿದೆ ಎಂದು ಸಚಿವ ಎಂಬಿ ಪಾಟೀಲ ಹರ್ಷ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಎಕ್ಸ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಂಡ ಅವರು, ಈ ರೈಲು ಸೇವೆಯನ್ನು ಕಾಯಂಗೊಳಿಸುವುದು, ಸಂಚಾರದ ಆವರ್ತನವನ್ನು ಹೆಚ್ಚಿಸುವುದು, ಪ್ರಯಾಣದ ಅವಧಿಯನ್ನು ಮತ್ತಷ್ಟು ಕಡಿಮೆಗೊಳಿಸುವುದು ಹಾಗೂ ಸಮಯದ ಬದಲಾವಣೆ ಸೇರಿದಂತೆ ವಿವಿಧ ಬೇಡಿಕೆಗಳ ಕುರಿತು ನಿರಂತರವಾಗಿ ಪ್ರಯತ್ನಗಳು ನಡೆದಿವೆ. ಈ ನಿಟ್ಟಿನಲ್ಲಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರೊಂದಿಗೆ ಹಲವು ಬಾರಿ ಸಭೆ-ಚರ್ಚೆ ನಡೆಸಿ ಮನವಿ ಸಲ್ಲಿಸಲಾಗಿತ್ತು. ಈ ಎಲ್ಲ ಸತತ ಪ್ರಯತ್ನಗಳ ಫಲವಾಗಿ ಆರಂಭದಲ್ಲಿ ವಾರಕ್ಕೊಮ್ಮೆ ಆರಂಭವಾಗಿದ್ದ ರೈಲು ಸಂಚಾರ ಇದೀಗ ವಾರದಲ್ಲಿ ಎರಡು ದಿನಗಳಿಗೆ ವಿಸ್ತರಣೆಯಾಗಿದೆ.

ಮುಂದಿನ ದಿನಗಳಲ್ಲಿ ಈ ರೈಲು ಸೇವೆಯನ್ನು ಕಾಯಂಗೊಳಿಸುವ ಹಾಗೂ ಇನ್ನಷ್ಟು ಸುಧಾರಣೆಗಳನ್ನು ತರುವವರೆಗೆ ನಮ್ಮ ಪ್ರಯತ್ನ ಮತ್ತು ಹೋರಾಟ ನಿರಂತರವಾಗಿ ಮುಂದುವರಿಯಲಿದೆ. ಪ್ರಯಾಣಿಕರಿಗೆ ಮತ್ತಷ್ಟು ಉತ್ತಮ ಸೇವೆಯನ್ನು ಒದಗಿಸುವುದು ನಮ್ಮ ಗುರಿಯಾಗಿದೆ ಎಂದಿದ್ದಾರೆ.

Edited By : Nirmala Aralikatti
PublicNext

PublicNext

31/05/2026 06:37 pm

Cinque Terre

5.98 K

Cinque Terre

0

ಸಂಬಂಧಿತ ಸುದ್ದಿ