ಚಿಕ್ಕಬಳ್ಳಾಪುರ : ಇಂದು ಡಿಕೆಶಿ ಮುಖ್ಯಮಂತ್ರಿಯಾಗಿ ಪದಗ್ರಹಣ ಹಿನ್ನೆಲೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ಪಟ್ಟಣದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿದೆ. ನಗರ ಹಾಗೂ ಗ್ರಾಮೀಣ ಭಾಗದ ಎಲ್ಲೆಡೆ ದೇವಸ್ಥಾನಗಳಲ್ಲಿ ಪೂಜೆ ಪುನಸ್ಕಾರ ಅನ್ನ ಸಂತರ್ಪಣೆ ಸಿಹಿ ಲಾಡು ಚಿಕನ್ ಮಟನ್ ಬಿರಿಯಾನಿ ವಿತರಣೆ ಮಾಡಲಾಯಿತು.
ಡಿಕೆಶಿ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುತ್ತಿರುವ ಹಿನ್ನೆಲೆ ಶಿಡ್ಲಘಟ್ಟ ನಗರದಲ್ಲಿ ಹಬ್ಬದ ವಾತಾವರಣ ಏರ್ಪಟ್ಟಿದ್ದು, ಡಿ.ಕೆ.ಶಿ ಅಭಿಮಾನಿ ಚಿಕನ್ ವಿಜಯ್ ಅವರು ಬರೋಬ್ಬರಿ 10 ಸಾವಿರ ಜನರಿಗೆ ಭರ್ಜರಿ ಚಿಕನ್ ಬಿರಿಯಾನಿ ರೆಡಿ ಮಾಡಿಸಿ ವಿತರಿಸುತ್ತಿದ್ದಾರೆ.
1250 ಕೆ.ಜಿ ಚಿಕನ್ ಬಳಸಿ ಅಡುಗೆ ತಯಾರಿಸುತ್ತಿದ್ದು, ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಶ್ರೀ ಸಲ್ಲಾಪುರಮ್ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಅಭಿಮಾನಿಗಳಿಗೆ ಭರ್ಜರಿ ಬಿರಿಯಾನಿ ವಿತರಿಸಿದ್ದಲ್ಲದೆ, ಪದಗ್ರಹಣ ಕಾರ್ಯಕ್ರಮವನ್ನು ನೇರಪ್ರಸಾರ ವೀಕ್ಷಣೆ ಮಾಡಲು ಬೃಹತ್ ಸ್ಕ್ರೀನ್ ವ್ಯವಸ್ಥೆಯು ಸಹ ಮಾಡಲಾಗಿದೆ.
ಚಿಕ್ಕತೇಕಹಳ್ಳಿ ಡಿ ಶಿವಕುಮಾರ್ ಪಬ್ಲಿಕ್ ನೆಕ್ಸ್ಟ್ ಚಿಕ್ಕಬಳ್ಳಾಪುರ
PublicNext
03/06/2026 05:39 pm
LOADING...