ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಯೋಗ್ಯ-2' ಫ್ಯಾನ್ಸ್‌ಗೆ ಗುಡ್ ನ್ಯೂಸ್ ಸದ್ಯದಲ್ಲೇ ರಿಲೀಸ್ ಆಗಲಿದೆ ಚಿತ್ರದ ಮೊದಲ ಸಾಂಗ್!

ಬೆಂಗಳೂರು : ಸ್ಯಾಂಡಲ್‌ವುಡ್‌ನಲ್ಲಿ ಧೂಳೆಬ್ಬಿಸಿದ್ದ 'ಅಯೋಗ್ಯ' ಚಿತ್ರದ ಸೀಕ್ವೆಲ್ ಅಯೋಗ್ಯ-2 ಈಗ ಸಖತ್ ಸೌಂಡ್ ಮಾಡ್ತಿದೆ. ಸದ್ಯ ಚಿತ್ರತಂಡದಿಂದ ಕಾಯುತ್ತಿದ್ದ ಬಿಗ್ ಅಪ್ಡೇಟ್ ಹೊರಬಿದ್ದಿದೆ. ಹೌದು, ಬಹುನಿರೀಕ್ಷಿತ ಸಿನಿಮಾದ ಮೊದಲ ಹಾಡಿನ ಬಿಡುಗಡೆ ಸಮಾರಂಭವನ್ನು ಅತ್ಯಂತ ಅದ್ಧೂರಿಯಾಗಿ ಹಮ್ಮಿಕೊಳ್ಳಲಾಗಿದೆ.

ಈ ಚಿತ್ರದಲ್ಲಿ ಪ್ರೇಕ್ಷಕರ ನೆಚ್ಚಿನ ಜೋಡಿಯಾದ 'ಲವ್ಲಿ ಸ್ಟಾರ್' ಸತೀಶ್ ನಿನಾಸಂ ಹಾಗೂ 'ಡಿಂಪಲ್ ಕ್ವೀನ್' ರಚಿತಾ ರಾಮ್ ಮತ್ತೆ ಒಟ್ಟಾಗಿ ತೆರೆ ಹಂಚಿಕೊಳ್ಳುತ್ತಿದ್ದಾರೆ. ಮೊದಲ ಭಾಗದ 'ಏನಮ್ಮಿ ಏನಮ್ಮಿ' ಸೂಪರ್ ಹಿಟ್ ಸಾಂಗ್‌ನಂತೆ, ಈ ಹೊಸ ಹಾಡು ಕೂಡ ಮೆಲೋಡಿಯಸ್ ಆಗಿ ಮೂಡಿಬಂದಿದ್ದು, ಪ್ರೇಕ್ಷಕರ ಗೆಲ್ಲಲು ರೆಡಿಯಾಗಿದೆ.

ಗ್ರಾಮ ಪಂಚಾಯಿತಿ ಹಿನ್ನೆಲೆಯ ಈ ಔಟ್ ಅಂಡ್ ಔಟ್ ಕಾಮಿಡಿ ಎಂಟರ್‌ಟೈನರ್ ಸಿನಿಮಾ ನೋಡಲು ಫ್ಯಾನ್ಸ್ ಕಾತರರಾಗಿದ್ದಾರೆ. ಸಿನಿಮಾ ಲೋಕದ ಇಂತಹದ್ದೇ ಲೇಟೆಸ್ಟ್ ಅಪ್ಡೇಟ್‌ಗಳಿಗಾಗಿ ನೋಡ್ತಾ ಇರಿ ಪಬ್ಲಿಕ್ ನೆಕ್ಸ್ಟ್

Edited By :
PublicNext

PublicNext

20/06/2026 06:39 pm

Cinque Terre

10.69 K

Cinque Terre

0

ಸಂಬಂಧಿತ ಸುದ್ದಿ