ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

VPN ಬಳಸಿ ಟೆಲಿಗ್ರಾಂನಲ್ಲಿ ನೀಟ್ ಮರುಪರೀಕ್ಷೆಯ ನಕಲಿ ಪ್ರಶ್ನೆಪತ್ರಿಕೆ ಹಂಚಿಕೆ : 19 ವರ್ಷದ ವಿದ್ಯಾರ್ಥಿ ಅರೆಸ್ಟ್!

ಜೈಪುರ: ನೀಟ್ ಮರುಪರೀಕ್ಷೆಗೆ ಸಂಬಂಧಿಸಿದ ನಕಲಿ ಪ್ರಶ್ನೆಪತ್ರಿಕೆಗಳನ್ನು ಟೆಲಿಗ್ರಾಂ ಆಪ್ ಮೂಲಕ ಹಂಚುತ್ತಿದ್ದ 19 ವರ್ಷದ ವಿದ್ಯಾರ್ಥಿಯನ್ನು ರಾಜಸ್ಥಾನದಲ್ಲಿ ಬಂಧಿಸಲಾಗಿದೆ.

ಅಮೆರಿಕ ಮೂಲದ ವಿಪಿಎನ್ (VPN) ಹಾಗೂ ಪ್ರಾಕ್ಸಿ ನೆಟ್‌ವರ್ಕ್‌ಗಳನ್ನು ಬಳಸಿಕೊಂಡು ಈ ಕೃತ್ಯ ಎಸಗಲಾಗಿದೆ. VPN ಬಳಸಿ ಟೆಲಿಗ್ರಾಂನಲ್ಲಿ ನೀಟ್ ಮರುಪರೀಕ್ಷೆಯ ನಕಲಿ ಪ್ರಶ್ನೆಪತ್ರಿಕೆಗಳನ್ನು ಹಂಚುತ್ತಿದ್ದ 19 ವರ್ಷದ ವಿದ್ಯಾರ್ಥಿಯನ್ನು ರಾಜಸ್ಥಾನದಲ್ಲಿ ಬಂಧಿಸಲಾಗಿದೆ.

ಬಂಧಿತ ಆರೋಪಿಯನ್ನು 19 ವರ್ಷದ ಆಕಾಶ್ ಎಂದು ಗುರುತಿಸಲಾಗಿದೆ. ಈತ ಟೆಲಿಗ್ರಾಂನಲ್ಲಿ 'ಪೇಪರ್ ಮಾಫಿಯಾ' ಎಂಬ ಹೆಸರಿನಲ್ಲಿ ಚಾನೆಲ್ ತೆರೆದು, ಅದರ ಮೂಲಕ ನಕಲಿ ಪ್ರಶ್ನೆಪತ್ರಿಕೆಗಳನ್ನು ಹಂಚುತ್ತಿದ್ದ. ಪ್ರತಿ ಪ್ರಶ್ನೆಪತ್ರಿಕೆಗೆ 4 ಸಾವಿರ ರೂ.ಯಂತೆ QR ಕೋಡ್ ಮೂಲಕ ಹಣ ಪಡೆಯುತ್ತಿದ್ದ ಎಂದು ತಿಳಿದುಬಂದಿದೆ.

ಪೊಲೀಸರ ಮಾಹಿತಿ ಪ್ರಕಾರ, ಈ ಚಾನೆಲ್‌ನಲ್ಲಿ ಒಟ್ಟು 52 ಸದಸ್ಯರಿದ್ದರು. ಆಕಾಶ್ ಸ್ವತಃ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದು, ನೀಟ್ ಪರೀಕ್ಷೆಗೆ ಸಂಬಂಧಿಸಿದ ಅಧ್ಯಯನ ಪುಸ್ತಕಗಳಿಂದ ಫೋಟೋಗಳನ್ನು ತೆಗೆದು, ಅವುಗಳನ್ನೇ ನಿಜವಾದ ಪ್ರಶ್ನೆಪತ್ರಿಕೆಗಳೆಂದು ಬಿಂಬಿಸಿ ಹಂಚುತ್ತಿದ್ದ.

ದೆಹಲಿಯ ಗುಪ್ತಚರ ಇಲಾಖೆ ನೀಡಿದ ನಿಖರ ಮಾಹಿತಿ ಆಧರಿಸಿ ಭಿಲ್ವಾರಾ ಪೊಲೀಸರು ಶುಕ್ರವಾರ ಮುಂಜಾನೆ (ಜೂ.19) ಆಕಾಶ್‌ನನ್ನು ಬಂಧಿಸಿದ್ದಾರೆ. ಬಂಧನ ಸಂದರ್ಭದಲ್ಲಿ ಆತನ ಮೊಬೈಲ್ ಫೋನ್, ನೀಟ್ ಅಧ್ಯಯನ ಸಾಮಗ್ರಿಗಳು ಹಾಗೂ ಇತರೆ ದಾಖಲೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಸದ್ಯ ಆರೋಪಿಯ ವಿರುದ್ಧ ವಂಚನೆ, ನಕಲಿ ಪ್ರಶ್ನೆಪತ್ರಿಕೆಗಳ ಮಾರಾಟ, ಮಾಹಿತಿ ತಂತ್ರಜ್ಞಾನ ಕಾಯ್ದೆ (IT ಕಾಯ್ದೆ) ಮತ್ತು ಸಾರ್ವಜನಿಕ ಪರೀಕ್ಷಾ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಪ್ರಕರಣದ ತನಿಖೆ ಮುಂದುವರಿದಿದ್ದು, ಆರೋಪಿ ಇದೇ ರೀತಿ ಎಷ್ಟು ಜನರಿಗೆ ವಂಚಿಸಿದ್ದಾನೆ, ಈ ದಂಧೆಯ ಹಿಂದೆ ಎಷ್ಟು ಜನರ ಕೈವಾಡವಿದೆ ಮತ್ತು ಬ್ಯಾಂಕ್ ವಹಿವಾಟುಗಳ ಬಗ್ಗೆ ತನಿಖಾಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.

ಇನ್ನು, ನೀಟ್ ಮರುಪರೀಕ್ಷೆಯ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಟೆಲಿಗ್ರಾಂ ಆಪ್ ಅನ್ನು ಜೂನ್ 22ರವರೆಗೆ ತಾತ್ಕಾಲಿಕವಾಗಿ ನಿಷೇಧಿಸಿದೆ. ಮೇ 3ರಂದು ನಡೆದಿದ್ದ ನೀಟ್ ಪರೀಕ್ಷೆ ರದ್ದಾದ ಬಳಿಕ ಟೆಲಿಗ್ರಾಂ ಆಪ್ ತೀವ್ರ ವಿಚಾರಣೆಗೆ ಒಳಪಟ್ಟಿತ್ತು.

Edited By : Abhishek Kamoji
PublicNext

PublicNext

20/06/2026 07:12 am

Cinque Terre

55.16 K

Cinque Terre

1

ಸಂಬಂಧಿತ ಸುದ್ದಿ