ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಳ್ಳಾರಿ: ರಸ್ತೆ ಕಾಮಗಾರಿಗೆ ತೆಗೆದ ಗುಂಡಿಯಲ್ಲಿ ಬಿದ್ದ ಗಂಡ ಹೆಂಡತಿ!

ಬಳ್ಳಾರಿ: ರಸ್ತೆ ಕಾಮಗಾರಿಗೆ ತೆಗೆದ ಗುಂಡಿಯಲ್ಲಿ ಬೈಕ್ ನಲ್ಲಿ ಬರುತ್ತಿದ್ದ ಗಂಡ ಹೆಂಡತಿ ಇಬ್ಬರು ಬಿದ್ದಿದ್ದಾರೆ. ಪರಿಣಾಮ ಸ್ಥಳದಲ್ಲೇ ಹೆಂಡತಿ ಮೃತಪಟ್ಟರೆ ಗಂಡನಿಗೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ಸಿರುಗುಪ್ಪ ತಾಲ್ಲೂಕಿನ ಚಾಣಕನೂರು ಕ್ರಾಸ್ ಹತ್ತಿರ ರಾಜ್ಯ ಹೆದ್ದಾರಿ 63ರಲ್ಲಿ ಈ ಘಟನೆ ನಡೆದಿದೆ.

ಮೃತ ಮಂಜುಳ(36) ತಾಲ್ಲೂಕಿನ ರಾವಿಹಾಳ್ ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನರ್ಸ್ ಸಿಬ್ಬಂದಿಯಾಗಿ ಕೆಲಸ ನಿರ್ವಹಿಸುತ್ತಿದ್ದರು.

ತೀವ್ರ ಗಾಯಗೊಂಡ ಚಂದ್ರಶೇಖರ (46) ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ರಸ್ತೆಯ ನಿರ್ಮಾಣದ ವೇಳೆ ಸೂಕ್ತ ನಾಮಫಲಕ ಮತ್ತು ಮಾರ್ಗ ಸೂಚನಾ ಬೋರ್ಡ್ ಹಾಕದೇ ಇರುವುದು ಘಟನೆ ಕಾರಣ ಎನ್ನಲಾಗುತ್ತಿದೆ. ರಾತ್ರಿಯ ವೇಳೆ ಸರಿಯಾಗಿ ರಸ್ತೆ ಕಾಣದೇ ಗುಂಡಿಗೆ ಬಿದ್ದಿದ್ದಾರೆ. ಈ ಕುರಿತು ಸಿರುಗುಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By :
Kshetra Samachara

Kshetra Samachara

06/06/2026 01:47 pm

Cinque Terre

3.14 K

Cinque Terre

0