ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭಟ್ಕಳ: ಕರಾಟೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಬ್ಲಾಕ್ ಬೆಲ್ಟ್ ಪ್ರದಾನ

ಭಟ್ಕಳ:ಕರಾಟೆ ಆತ್ಮರಕ್ಷಣೆ, ಆತ್ಮವಿಶ್ವಾಸ ಹಾಗೂ ಶಿಸ್ತು ಬೆಳೆಸುವ ಅತ್ಯುತ್ತಮ ಕಲೆಯಾಗಿದ್ದು, ಮಕ್ಕಳಿಗೆ ಅದರ ತರಬೇತಿ ನೀಡುವ ಕಾರ್ಯಕ್ಕೆ ಹೆಚ್ಚಿನ ಉತ್ತೇಜನ ಸಿಗಬೇಕು ಎಂದು ಸೋಡಿಗದ್ದೆ ಶ್ರೀ ಮಹಾಸತಿ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಹಾಗೂ ನಿವೃತ್ತ ಶಿಕ್ಷಣಾಧಿಕಾರಿ ದೇವಿದಾಸ ಮೊಗೇರ ಹೇಳಿದರು.

ನಾಗಶ್ರೀ ಮಾರ್ಷಲ್ ಆರ್ಟ್ಸ್ ಎಂಡ್ ಫಿಟ್ನೆಸ್ ಭಟ್ಕಳ ಹಾಗೂ ಶೋಟೋಕನ್ ಇಂಡಿಯಾ ಆರ್ಗನೈಸೇಶನ್ ಬೆಂಗಳೂರು,ಸಹಯೋಗದಲ್ಲಿ ಆಸರಕೇರಿಯ ಶ್ರೀ ನಿಚ್ಚಲಮಕ್ಕಿ ತಿರುಮಲ ವೆಂಕಟರಮಣ ಸಭಾಭವನದಲ್ಲಿ ಆಯೋಜಿಸಿದ್ದ ಬ್ಲಾಕ್ ಬೆಲ್ಟ್ ವಿತರಣಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಇಂದಿನ ಸಮಾಜದಲ್ಲಿ ಮಹಿಳೆಯರು ಹಾಗೂ ಮಕ್ಕಳ ಸುರಕ್ಷತೆಗೆ ಸ್ವರಕ್ಷಣಾ ಕೌಶಲ್ಯಗಳು ಅತ್ಯಗತ್ಯವಾಗಿವೆ. ಕರಾಟೆ ಕಲಿತವರು ಯಾವುದೇ ಸವಾಲಿನ ಪರಿಸ್ಥಿತಿಯನ್ನು ಆತ್ಮವಿಶ್ವಾಸದಿಂದ ಎದುರಿಸಲು ಸಾಧ್ಯವಾಗುತ್ತದೆ. ಸರ್ಕಾರವು ಒಂದು ಹಂತದಲ್ಲಿ ಶಾಲಾ ಮಕ್ಕಳಿಗೆ ಕರಾಟೆ ತರಬೇತಿ ಆರಂಭಿಸಿದ್ದರೂ ಅದು ನಂತರ ಸ್ಥಗಿತಗೊಂಡಿದೆ. ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗಾಗಿ ಆ ಯೋಜನೆಯನ್ನು ಪುನರಾರಂಭಿಸುವ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶೋಟೋಕಾನ್ ಇಂಡಿಯಾ ಆರ್ಗನೈಸೇಶನ್ ಸಂಸ್ಥಾಪಕ ಹಾಗೂ ತಾಂತ್ರಿಕ ನಿರ್ದೇಶಕ ಭಾರ್ಗವ ರೆಡ್ಡಿ ಮಾತನಾಡಿ, ಕರಾಟೆ ಕೇವಲ ಸ್ಪರ್ಧಾತ್ಮಕ ಕ್ರೀಡೆಯಲ್ಲ, ಅದು ಉತ್ತಮ ವ್ಯಕ್ತಿತ್ವ ರೂಪಿಸುವ ಸಾಧನವಾಗಿದೆ. ಕ್ರೀಡಾ ಕೋಟಾದ ಮೂಲಕ ಉನ್ನತ ಶಿಕ್ಷಣ ಹಾಗೂ ಉದ್ಯೋಗ ಕ್ಷೇತ್ರದಲ್ಲಿಯೂ ಅವಕಾಶಗಳು ದೊರೆಯುತ್ತವೆ. ಬ್ಲಾಕ್ ಬೆಲ್ಟ್ ಪಡೆಯುವುದು ಕರಾಟೆ ಪಯಣದ ಮಹತ್ವದ ಮೈಲುಗಲ್ಲು ಎಂದು ಹೇಳಿದರು.

ನಾಮಧಾರಿ ಸಮಾಜದ ಅಧ್ಯಕ್ಷ ಅರುಣ ನಾಯ್ಕ ಮಾತನಾಡಿ, ಭಟ್ಕಳದಲ್ಲಿ ಕರಾಟೆ ಬೆಳವಣಿಗೆಗೆ ಶ್ರಮಿಸಿದ ವಾಸು ನಾಯ್ಕ ಅವರ ಕೊಡುಗೆಯನ್ನು ಸ್ಮರಿಸಿದರು. ವಿದ್ಯಾಭಾರತಿ ಶಾಲೆಯ ಮುಖ್ಯಾಧ್ಯಾಪಕಿ ರೂಪಾ ರಮೇಶ ಖಾರ್ವಿ ಮಾತನಾಡಿ, ಬ್ಲಾಕ್ ಬೆಲ್ಟ್ ಪಡೆಯಲು ವಿದ್ಯಾರ್ಥಿಗಳು ನಿರಂತರ ಅಭ್ಯಾಸ, ಶಿಸ್ತು ಹಾಗೂ ಪರಿಶ್ರಮ ತೋರಬೇಕಾಗುತ್ತದೆ. ತಮ್ಮ ಶಾಲೆಯ ಮೂವರು ವಿದ್ಯಾರ್ಥಿಗಳು ಈ ಸಾಧನೆ ಮಾಡಿರುವುದು ಹೆಮ್ಮೆಯ ವಿಷಯ ಎಂದರು.

ಜಿಲ್ಲಾ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ರಾಧಾಕೃಷ್ಣ ಭಟ್ಟ ಮಾತನಾಡಿ, ಗ್ರಾಮೀಣ ಭಾಗದ ಮಕ್ಕಳಿಗೂ ಕರಾಟೆ ತರಬೇತಿ ತಲುಪಿಸುವ ಮೂಲಕ ನಾಗಶ್ರೀ ಮಾರ್ಷಲ್ ಆರ್ಟ್ಸ್ ಎಂಡ್ ಫಿಟ್ನೆಸ್ ಉತ್ತಮ ಸೇವೆ ಸಲ್ಲಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಕಾನೂನು ಸಲಹೆಗಾರ ಮನೋಜ ನಾಯ್ಕ, ಸರ್ಪನಕಟ್ಟೆ ವೀರ ಸಾವರ್ಕರ್ ಸೇವಾ ಸಮಿತಿ ಅಧ್ಯಕ್ಷ ಸತೀಶ ನಾಯ್ಕ ಹಾಗೂ ಶೋಟೋಕಾನ್ ಇಂಡಿಯಾ ಆರ್ಗನೈಸೇಶನ್ ಜಿಲ್ಲಾ ಅಧ್ಯಕ್ಷ ಈಶ್ವರ ನಾಯ್ಕ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಪವನ ವೆಂಕಟೇಶ ನಾಯ್ಕ, ರೋಹಿಪ್ರಸಾದ್ ಸಂತೋಷ ನಾಯ್ಕ, ಧನ್ವಿತಾ ವಾಸು ಮೊಗೇರ, ಸಾನ್ವಿ ಚಂದ್ರ ನಾಯ್ಕ, ಅಖಿಲಾ ಚಂದ್ರಕಾಂತ ನಾಯ್ಕ, ಯಶಸ್ ವಾಮನ ಮೊಗೇರ, ಯಶಸ್ ಶ್ರೀಧರ ಮೊಗೇರ, ರತನ ಲಕ್ಷ್ಮಣ ಪಾವಸ್ಕರ್, ಶ್ರೇಯಸ್ ಭಾಸ್ಕರ ಮೊಗೇರ ಹಾಗೂ ಸುರೇಶ ನಾಯ್ಕ ಅವರಿಗೆ ಬ್ಲಾಕ್ ಬೆಲ್ಟ್ ಮತ್ತು ಡಿಗ್ರಿ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.

ಪತ್ರಕರ್ತ ಈಶ್ವರ ನಾಯ್ಕ ಕಾರ್ಯಕ್ರಮ ನಿರೂಪಿಸಿದರು. ನಾಗಶ್ರೀ ಸ್ವಾಗತಿಸಿ ವಂದಿಸಿದರು.

Edited By : PublicNext Desk
Kshetra Samachara

Kshetra Samachara

07/06/2026 09:15 pm

Cinque Terre

2.54 K

Cinque Terre

0

ಸಂಬಂಧಿತ ಸುದ್ದಿ