ಗದಗ: ಮಾದಕ ದ್ರವ್ಯಗಳ ಅತಿಯಾದ ಬಳಕೆ ವ್ಯಕ್ತಿಯ ಆರೋಗ್ಯ, ಕುಟುಂಬ ಹಾಗೂ ಸಮಾಜದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಇಂದಿನ ಯುವಜನತೆ ಮತ್ತು ವಿದ್ಯಾರ್ಥಿಗಳನ್ನು ಈ ದುಷ್ಚಟದಿಂದ ದೂರವಿಡುವ ಅವಶ್ಯಕತೆ ಇದೆ ಎಂದು ಶಿರಹಟ್ಟಿ ಅಬಕಾರಿ ಇನ್ ಸ್ಪೆಕ್ಟರ್ ಸಂತೋಷ್ ರಡ್ಡೇರ ಅಭಿಪ್ರಾಯಪಟ್ಟರು.
ಲಕ್ಷ್ಮೇಶ್ವರ ಪಟ್ಟಣದ ಅಗಡಿ ಇಂಜನೀಯರಿಂಗ್ ಕಾಲೇಜಿನಲ್ಲಿ ಜರುಗಿದ ಮಾದಕ ದ್ರವ್ಯ ವ್ಯಸನ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡುತ್ತ ಅವರು ಯುವಜನತೆಯೇ ದೇಶದ ಭವಿಷ್ಯ ನಾವು ಜಾಗೃತಿ, ಶಿಕ್ಷಣ ಮತ್ತು ದೃಢ ಸಂಕಲ್ಪದ ಮೂಲಕ ನಾವು ಆರೋಗ್ಯಕರ ಸಮಾಜವನ್ನು ನಿರ್ಮಿಸಬಹುದು ಎಂದರು.
ಸಮಾರಂಭದಲ್ಲಿ ಅಬಕಾರಿ ಇಲಾಖೆ ಸಬ್ ಇನ್ಸ್ಪೆಕ್ಟರ್ ಎನ್ ಸಿ ದಾನಪ್ಪನವರ,ಎನ್ ಬಿ ಹಮ್ಮಣ ನವರ,ಪ್ರಾಚಾರ್ಯ ಡಾ ಪರಶುರುರಾಮ ಬಾರಕಿ, ಡಾ ಸುಭಾಸ್ ಮೇಟಿ, ಡಾ ಆರ್ ಎಂ ಪಾಟೀಲ, ಪ್ರೊ ವಿಕ್ರಂ ಶಿರೋಳ್, ಡಾ ಗಿರೀಶ್ ಯತ್ತಿನಹಳ್ಳಿ, ಡಾ ಮಹೇಶ್ ಅಕ್ಕಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರೊ ಷಣ್ಮುಖ ಜಿ, ಪ್ರೊ ಗೀತಾ ಬ್ಯಾಟಿ ಸಂತೋಷ ಹುಲಿಕಟ್ಟಿ ಪ್ರವೀಣ ಕೋಟಿ ಕಾರ್ಯಕ್ರಮ ನಿರ್ವಹಿಸಿದರು.
Kshetra Samachara
08/06/2026 01:37 pm
LOADING...