ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಜಯಪುರ:ಪಾನ್ ಶಾಪ್ ನಲ್ಲಿ ಸ್ಫೋಟ ಮೂವರಿಗೆ ಗಾಯ

ಅನುಮಾನಾಸ್ಪದವಾಗಿ ಪಾನ್ ಶಾಪ್ ನಲ್ಲಿ ಸ್ಫೋಟ ಸಂಭವಿಸಿ ಮೂವರಿಗೆ ಗಂಭೀರ ಗಾಯಗಳಾಗಿರುವ ಘಟನೆ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಮಮದಾಪೂರ ಗ್ರಾಮದಲ್ಲಿ ಭಾನುವಾರ ರಾತ್ರಿ ಸಂಭವಿಸಿದೆ.

ಗ್ರಾಮದ ರವಿಕಿರಣ ಪಾಟೀಲ್ ಎಂಬುವವರಿಗೆ ಸೇರಿದ ಪಾನ್ ಶಾಪ್ ನಲ್ಲಿ ಘಟನೆ ಸಂಭವಿಸಿದ್ದು

ಪಾನ್ ಶಾಪ್ ಒಳಗಿದ್ದ ಫ್ರಿಡ್ಜ್ ಗೆ ಯಾವುದೇ ಹಾನಿಯಾಗಿಲ್ಲ ಹೊರಗಡೆಯಿಂದ ಸ್ಫೋಟವಾಗಿರೋ ಶಂಕೆ ವ್ಯಕ್ತವಾಗಿದೆ.

ಪಾನ್ ಶಾಪ್ ನಲ್ಲಿದ್ದ ವಿಜಯಕುಮಾರ

ಪಾನ್ ಶಾಪ್ ಹೊರಗಡೆ ಇದ್ದ ಪ್ರಶಾಂತ, ಸಿದ್ದು ಎಂಬ ಮೂವರಿಗೆ ಗಾಯಗಳಾಗಿದ್ದು ಗಾಯಾಳುಗಳನ್ನು ವಿಜಯಪುರದ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.

ಸ್ಥಳಕ್ಕೆ ಬಬಲೇಶ್ವರ ಪೊಲೀಸರ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ, ಅಗ್ನಿಶಾಮಕ ದಳ, ಸೊಕೋ ತಂಡ ಶ್ವಾನದಳದಿಂದ ಪರೀಕ್ಷೆ ಮುಂದುವರೆದಿದೆ ಯಾವುದೇ ಸ್ಫೋಟಕ ವಸ್ತುಗಳು ಪತ್ತೆಯಾಗಿಲ್ಲ ನಿನ್ನೆ ಸಾಯಂಕಾಲ ಬಳಿಕ ಮಳೆ ಸುರಿದಿದ್ದು ಸಿಡಿದು ಬಡಿದಿರೋ ಶಂಕೆ ವ್ಯಕ್ತಪಡಿಸಿದ್ದಾರೆ ತನಿಖೆಯ ಬಳಿಕ ಸ್ಫೋಟಕ್ಕೆ ನಿಖರ ಕಾರಣ ತಿಳಿದು ಬರಲಿದೆ.

ಬಬಲೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

ಪಬ್ಲಿಕ್ ನೆಕ್ಸ್ಟ್ ವಿಜಯಪುರ

Edited By : Manjunath H D
PublicNext

PublicNext

08/06/2026 03:43 pm

Cinque Terre

10.52 K

Cinque Terre

0