ಯಾದಗಿರಿ: ಶಹಾಪುರ ತಾಲೂಕಿನ ಶರಣಬಸಪ್ಪ ಗೌಡ ದರ್ಶನಾಪುರ ಅವರಿಗೆ ಸಚಿವ ಸ್ಥಾನ ಕೊಡಬೇಕು ಅನ್ನೋ ಒತ್ತಾಯ ಕಾಂಗ್ರೆಸ್ ಕಾರ್ಯಕರ್ತರು ಮಾಡಿದ್ದಾರೆ. ಈ ಬಗ್ಗೆ ಸುದ್ದಿಗೋಷ್ಠಿ ಮಾಡಿ ಕೆಪಿಸಿಸಿ ಪರಿಶಿಷ್ಟ ಪಂಗಡ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ರಾಮುನಾಯಕ ಅರಳಳ್ಳಿ ಒತ್ತಾಯಿಸಿದ್ದಾರೆ.
ಮೊದಲ ಹಂತದಲ್ಲಿಯೇ ಸಚಿವಸ್ಥಾನ ನೀಡಬೇಕಿತ್ತು ಯಾದಗಿರಿ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ನಿರಾಶೆಯಾಗಿದೆ ಯಾದಗಿರಿ ಜಿಲ್ಲೆಗೆ ಯಾವುದೇ ಸಚಿವಸ್ಥಾನ ನೀಡಿಲ್ಲ ಎಂದು ಪಕ್ಷದ ಕಾರ್ಯಕರ್ತರು ಬೇಸರದಲ್ಲಿದ್ದಾರೆ ಮುಂದಿನ ಕ್ಯಾಬಿನೆಟ್ ವಿಸ್ತರಣೆಯಲ್ಲಿ ಶರಣಬಸ್ಸಪ್ಪ ದರ್ಶನಾಪೂರ್ ಅವರಿಗೆ ಉತ್ತಮ ಖಾತೆ ನೀಡಬೇಕೆಂದು ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಮತ್ತು ಸುರ್ಜೆವಾಲಾ ಅವರಿಗೆ ಮನವಿಯನ್ನು ಮಾಡುತ್ತೇನೆ ಎಂದು, ಕೆಪಿಸಿಸಿ ಪರಿಶಿಷ್ಟ ಪಂಗಡ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ರಾಮುನಾಯಕ ಅರಳಳ್ಳಿ ಅವರು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.
PublicNext
09/06/2026 08:27 am
LOADING...