ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವದೆಹಲಿ: ಕೇಂದ್ರ ಸರ್ಕಾರದ ಫಾಸ್ಟ್ ಟ್ರ್ಯಾಕ್ ಇಮಿಗ್ರೇಷನ್ ಕಾಂತ್ರಿಗೆ ಸಾನಿಯಾ ಮೆಚ್ಚುಗೆ

ನವದೆಹಲಿ: ಅಂತರರಾಷ್ಟ್ರೀಯ ಪ್ರಯಾಣವನ್ನು ಮತ್ತಷ್ಟು ಸುಲಭ ಮತ್ತು ವೇಗಗೊಳಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ‘ಫಾಸ್ಟ್ ಟ್ರ್ಯಾಕ್ ಇಮಿಗ್ರೇಷನ್ – ಟ್ರಸ್ಟೆಡ್ ಟ್ರಾವೆಲರ್ ಪ್ರೋಗ್ರಾಂ’ (FTI-TTP) ದೇಶಾದ್ಯಂತ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ತಂತ್ರಜ್ಞಾನ ಆಧಾರಿತ ಈ ಯೋಜನೆಯ ಮೂಲಕ ವಿಮಾನ ನಿಲ್ದಾಣಗಳಲ್ಲಿ ವಲಸೆ ಪ್ರಕ್ರಿಯೆಯನ್ನು ಕೇವಲ ಕೆಲವೇ ಸೆಕೆಂಡುಗಳಲ್ಲಿ ಪೂರ್ಣಗೊಳಿಸಲು ಸಾಧ್ಯವಾಗುತ್ತಿದೆ.

ಟೆನಿಸ್ ತಾರೆ ಸಾನಿಯಾ ಮಿರ್ಜಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಈ ಯೋಜನೆಯ ಅನುಭವ ಹಂಚಿಕೊಂಡಿದ್ದು, ಪ್ರಯಾಣಿಕರಿಗೆ ಇದರಿಂದ ಸಮಯ ಉಳಿತಾಯವಾಗುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 2024ರಲ್ಲಿ ಆರಂಭವಾದ ಈ ಯೋಜನೆಯಡಿ ನೋಂದಾಯಿತ ಪ್ರಯಾಣಿಕರು ಸಾಮಾನ್ಯ ಇಮಿಗ್ರೇಷನ್ ಸರತಿ ಸಾಲುಗಳನ್ನು ತಪ್ಪಿಸಿ, ಸುಮಾರು 30 ಸೆಕೆಂಡುಗಳಲ್ಲಿ ಕ್ಲಿಯರೆನ್ಸ್ ಪಡೆಯಬಹುದು.

ಪ್ರಸ್ತುತ ದೆಹಲಿ, ಮುಂಬೈ, ಬೆಂಗಳೂರು, ಚೆನ್ನೈ, ಹೈದರಾಬಾದ್, ಕೋಲ್ಕತ್ತಾ ಸೇರಿದಂತೆ ದೇಶದ 13 ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಈ ಸೌಲಭ್ಯ ಲಭ್ಯವಿದೆ. ಪ್ರಯಾಣಿಕರು ಸ್ವಯಂ ಸೇವಾ ಇ-ಗೇಟ್‌ಗಳಲ್ಲಿ ಪಾಸ್‌ಪೋರ್ಟ್, ಬೋರ್ಡಿಂಗ್ ಪಾಸ್ ಸ್ಕ್ಯಾನ್ ಮಾಡಿ ಬಯೋಮೆಟ್ರಿಕ್ ಪರಿಶೀಲನೆ ಪೂರ್ಣಗೊಳಿಸಿದರೆ ಸಾಕು.

ಭಾರತೀಯ ನಾಗರಿಕರು ಹಾಗೂ OCI ಕಾರ್ಡ್‌ದಾರರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಆನ್‌ಲೈನ್ ನೋಂದಣಿ, ದಾಖಲೆ ಪರಿಶೀಲನೆ ಮತ್ತು ಬಯೋಮೆಟ್ರಿಕ್ ಪ್ರಕ್ರಿಯೆಯ ಬಳಿಕ ಅನುಮೋದನೆ ನೀಡಲಾಗುತ್ತದೆ. ವಿಮಾನ ನಿಲ್ದಾಣಗಳಲ್ಲಿ ‘ವೇಗದ ಪ್ರಯಾಣ, ಸುರಕ್ಷಿತ ಪರಿಶೀಲನೆ’ ಎಂಬ ಹೊಸ ಅನುಭವವನ್ನು ಈ ಯೋಜನೆ ನೀಡುತ್ತಿದೆ.

Edited By :
PublicNext

PublicNext

09/06/2026 04:35 pm

Cinque Terre

12.26 K

Cinque Terre

0

ಸಂಬಂಧಿತ ಸುದ್ದಿ